ರುದ್ರಾಭಿಷೇಕದ ಆರಂಭ

ರುದ್ರಾಭಿಷೇಕದ ಆರಂಭ ಸಂಸ್ಕೃತದಲ್ಲಿ : ಓಂ ಅಸ್ಯ ಶ್ರೀರುದ್ರಪ್ರಶ್ನಮಹಾಮಂತ್ರಸ್ಯ | ಅಘೋರ ಋಷಿಃ | ಅನುಷ್ಟುಪ್ ಛಂದಃ | ಸಂಕರ್ಷಣಮೂರ್ತಿ ಸ್ವರೂಪೋ ಯೋಸಾವಾದಿತ್ಯಃ ಪರಮಪುರುಷಃ ಸ ಏಷ ರುದ್ರೋ ದೇವತಾ | ನಮಶ್ಶಿವಾಯೇತಿ ಬೀಜಮ್ | ಶಿವತರಾಯೇತಿ ಶಕ್ತಿಃ ಮಹಾದೇವಾಯೇತಿ ಕೀಲಕಮ್ | ಸಾಂಬಪರಮೇಶ್ವರ ಪ್ರಸಾದಸಿದ್ಧ್ಯರ್ಥೇ ಏಕವಾರಂ ವಾ ಏಕಾದಶವಾರಂ ವಾ ಶತವಾರಂ ರುದ್ರಜಪಾಭಿಷೇಕೇ ವಿನಿಯೋಗಃ || ಕನ್ನಡದಲ್ಲಿ : ಓಂ ರುದ್ರಪ್ರಶ್ನೆಯರೂಪದೀ ಮಹಾಮಂತ್ರಕೆ ಅಘೋರನೇ ಋಷಿಯು | ಅನುಷ್ಟುಪ್ ಛಂದಸ್ಸು | ಸಂಕರ್ಷಣಸ್ವರೂಪದಾದಿತ್ಯರೂಪದ ಪರಮಪುರುಷನೆ ಈ ರುದ್ರದೇವತೆಯು | ನಮಶ್ಶಿವಾಯವೆಂಬುದೆ ಬೀಜ | ಶಿವತರವೆನುವುದು ಶಕ್ತಿ | ಮಹಾದೇವ ಎಂಬುದು ಕೀಲಕವು | ಸಾಂಬ ಪರಮೇಶ್ವರನ ಪ್ರಸಾದ ಸಿದ್ಧಿಸಲು ಒಮ್ಮೆ ಯಾ ಹನ್ನೊಂದು ಸಲ ಯಾ ನೂರು ಸಲ ರುದ್ರಾಭಿಷೇಕ ವಿನಿಯೋಗ ವಿವರಣೆ : ಓಂ ಈ ರುದ್ರಪ್ರಶ್ನಕರೂಪವಾದ ಮಹಾಮಂತ್ರಕ್ಕೆ - ಋಷಿ - ಅಘೋರ ; ಛಂದಸ್ಸು - ಅನುಷ್ಟುಪ್ ; ದೇವತೆ - ಸಂಕರ್ಷಣಮೂರ್ತಿ ಸ್ವರೂಪನಾದ ಯಾವ ಆ ಆದಿತ್ಯರೂಪನಾದ ಪರಮ ಪುರುಷನುಂಟೋ ಅವನೇ ಈ ರುದ್ರದೇವತೆಯಾಗಿದ್ದಾನೆ. (ಒಂದು ಗಾಯತ್ರೀ ಛಂದಸ್ಸು ಮುಉರು ಅನುಷ್ಟುಪ್ ಛಂದಸ್ಸುಗಳು ಮೂರು ಪಂಕ್ತಿ ಛಂದಸ್ಸುಗಳು ಏಳು ಅನುಷ್ಟುಪ್ ಛಂದಸ್ಸುಗಳು ಎರಡು ಜಗತೀ ಛಂದಸ್ಸುಗಳು). ಬಿ...