Posts

ನಾಸದೀಯ ಸೂಕ್ತ (ಋಗ್ವೇದ )

Image
ನಾಸದೀಯ ಸೂಕ್ತ ( ಋಗ್ವೇದ ) ಪ್ರಸ್ತಾವನೆ : ಋಗ್ವೇದವು ಸೃಷ್ಟಿಯನ್ನು ಕುರಿತು , ಒಟ್ಟಾಗಿ “ ಭಾವ ವೃತ್ತ ” ಎಂದು ಕರೆಯಲಾದ ಅನೇಕ ಸೂಕ್ತಗಳಲ್ಲಿ ಅತ್ಯಂತ ಮೌಲಿಕ ರೀತಿಯಲ್ಲಿ ವಿವರಿಸುತ್ತದೆ . ಅವು ಸೃಷ್ಟ್ಯಾರಂಭವನ್ನು ಕುರಿತ ಚುರುಕಾದ ತಾತ್ತ್ವಿಕ ವಿಚಾರಗಳನ್ನುಳ್ಳ ಸೂಕ್ತಗಳಾಗಿವೆ . (10.129, 154, 190) ಹಾಗೂ ಮತ್ತಿತರ ಸೂಕ್ತಗಳು ಇದರಲ್ಲಿ ಬರುತ್ತವೆ . ಇಡೀ ಋಗ್ವೇದದಲ್ಲಿಯೇ ಅತ್ಯಂತ ತಾತ್ತ್ವಿಕ ವಿಚಾರಗಳನ್ನುಳ್ಳ ಸೂಕ್ತವೆಂದರೆ ಸೃಷ್ಟಿಗೆ ಸಂಬಂಧಿಸಿದುದು (10.129). ಇದು ಋಷಿ ಪ್ರಜಾಪತಿ ಪರಮೇಷ್ಟಿಗೆ ಅಂಕಿತವಾದದ್ದು . ಇದೆರಲ್ಲಿ ಏಳು ಮಂತ್ರಗಳುಂಟು . ಮೊದಲ ಎರಡು ಮಂತ್ರಗಳು ಸೃಷ್ಟಿಯ ಆದಿಯನ್ನು ಕುರಿತು ಅನೇಕ ಅಭಿಪ್ರಾಯಗಳನ್ನು ಮಂಡಿಸುತ್ತದೆ ; ಈ ಸೂಕ್ತ ಈ ಅಭಿಪ್ರಾಯಗಳಿಗೆ ( ದೃಷ್ಟಿಕೋನ ) ಸಂಬಂಧಿಸಿಲ್ಲ , ಅದು ಈ ಕುರಿತು ಯಾವ ವಿಮರ್ಶೆಯನ್ನೂ ಮಾಡುವುದಿಲ್ಲ . ಋಷಿಯು ತನ್ನ ದರ್ಶನವನ್ನು ವ್ಯಕ್ತಪಡಿಸುತ್ತಿದ್ದಾನೆ . ಮೊದಲನೇ ಮಂತ್ರದ ಪೂರ್ವಾರ್ಧವು ಸತ್ ( ಅಸ್ತಿತ್ವ ), ಅಸತ್ ( ಅನಸ್ತಿತ್ತ್ವ ), ರಜಸ್ ( ಚಲನಾ ತತ್ತ್ವ ), ವ್ಯೋಮನ್ ( ಆದಿಮ ಆಕಾಶ ) ಗಳನ್ನು ಪ್ರಸ್ತಾಪಿಸುತ್ತದೆ . ಅದು ಈ ಕಲ್ಪನೆಗಳನ್ನು ಸಂಬಂಧಿಸಿ ಹೇಳುವುದಿಲ್ಲ . ಸೂಕ್ತ 10.72.2 ರಲ್ಲಿ ಸತ್ ಎಂಬುದು ಅಸತ್ ದಿಂದ ಜನಿಸಿತು ಎಂದು ವಿವರಿಸಿದೆ . ಮಂತ್ರ 10.5.7 ಹ