Posts

Showing posts from October, 2018

ಪುರುಶಸೂಕ್ತ - ವಿಸ್ತೃತ ಲೇಖನ

ಪುರುಷ ಸೂಕ್ತ ( ವಿವರಣಾತ್ಮಕ ಲೇಖನ ) ಭೂಮಿಕ : ಪುರುಷ ಸೂಕ್ತ ( ಅಥವಾ ಪೌರುಷ ) ಎಂದು ಪ್ರಚಲಿತವಾದ ಸೂಕ್ತವು ಮೂಲದಲ್ಲಿ ಋಗ್ವೇದದಲ್ಲಿ ಕಂಡುಬರುವುದು . ಅದು ಶುಕ್ಲ ಯಜುರ್ವೇದ ವಾಜಸನೇಯ ಸಂಹಿತೆ , ಶತಪಥ ಬ್ರಾಹ್ಮಣ , ತೈತ್ತಿರೀಯ ಆರಣ್ಯಕ , ಆಪಸ್ತಂಭ ಶ್ರೌತ ಸೂತ್ರಗಳಲ್ಲೂ ಕಾಣುವುದು . ಈ ಸೂಕ್ತವು ವೃದ್ಧಹಾರೀತ ಸಂಹಿತೆಯಲ್ಲಿ ' ಸಹಸ್ರಶೀರ್ಷ ಸೂಕ್ತ " ವೆಂದೂ ಉಲ್ಲೆಖಿಸಲಾಗಿದೆ . ಇದಲ್ಲದೇ ತೈತ್ತಿರೀಯ ಆರಣ್ಯಕದಲ್ಲಿ 13 ಮಂತ್ರಗಳ ಮಹಾನಾರಾಯಣೋಪನಿಷದ್ ಮತ್ತೊಂದು ಪುರುಷ ಸೂಕ್ತ . ಇದು " ಸಹಸ್ರಶೀರ್ಷಂ ದೇವಮ್ " ಎಂಬ ಪದಗಳಿಂದ ಪ್ರಾರಂಭವಾಗುತ್ತದೆ . ಈ ಸೂಕ್ತದಲ್ಲೂ ಪುರುಷನ ಕಲ್ಯಾಣ ಗುಣಗಳನ್ನು ಸ್ತುತಿಸಲಾಗಿದೆ . ಇದನ್ನು " ಮಹಾ ನಾರಾಯಣೀಯಮ್ " ಎಂದು ಕರೆಯಲಾಗಿದೆ . ಪುರುಷ ಸೂಕ್ತದ ಋಷಿಯಾದ ನಾರಾಯಣನಿಗೆ ಇದು ಸಂಬಂಧಪಟ್ಟಿದೆ . ಋಗ್ವೇದ ಸಂಹಿತೆಯ ಪುರುಷ ಸೂಕ್ತದಲ್ಲಿ 16 ಮಂತ್ರಗಳಿವೆ ಹಾಗೂ ಈ ಎಲ್ಲಾ 16 ಮಂತ್ರಗಳೂ ಯಜುರ್ವೇದದಲ್ಲೂ ಕೆಲವು ವ್ಯತ್ಯಾಸಗಳೊಂದಿಗೆ ಕಾಣುವುದು . ಯಜುರ್ವೇದದಲ್ಲಿ ಕೃಷ್ಣ ಹಾಗೂ ಶುಕ್ಲ ಯಜುರ್ವೇದ ಶಾಖೆಗಳಿವೆ . ಕೃಷ್ಣ ಯಜುರ್ವೇದದ ತೈತ್ತಿರೀಯ ಶಾಖೆಯಲ್ಲಿ ಪುರುಷನನ್ನು ಕುರಿತು 18 ಮಂತ್ರಗಳಿವೆ . ಅದರಲ್ಲಿ ಋಗ್ವೇದದ ಎಲ್ಲಾ 16 ಮಂತ್ರಗಳೂ ಇರುವುದು . ತೈತ್ತಿರೀಯ ಆರಣ್ಯಕದಲ್ಲಿ ಮಂತ್ರದ ನಿರೂಪಣಾ ಕ್ರಮವು ಋಗ್ವೇದದಲ್ಲಿನ ಕ್ರಮಕ