ನಾಸದೀಯ ಸೂಕ್ತ (ಋಗ್ವೇದ )




ನಾಸದೀಯ ಸೂಕ್ತ (ಋಗ್ವೇದ )


ಪ್ರಸ್ತಾವನೆ :

ಋಗ್ವೇದವು ಸೃಷ್ಟಿಯನ್ನು ಕುರಿತು, ಒಟ್ಟಾಗಿಭಾವ ವೃತ್ತಎಂದು ಕರೆಯಲಾದ ಅನೇಕ ಸೂಕ್ತಗಳಲ್ಲಿ ಅತ್ಯಂತ ಮೌಲಿಕ ರೀತಿಯಲ್ಲಿ ವಿವರಿಸುತ್ತದೆ. ಅವು ಸೃಷ್ಟ್ಯಾರಂಭವನ್ನು ಕುರಿತ ಚುರುಕಾದ ತಾತ್ತ್ವಿಕ ವಿಚಾರಗಳನ್ನುಳ್ಳ ಸೂಕ್ತಗಳಾಗಿವೆ. (10.129, 154, 190) ಹಾಗೂ ಮತ್ತಿತರ ಸೂಕ್ತಗಳು ಇದರಲ್ಲಿ ಬರುತ್ತವೆ. ಇಡೀ ಋಗ್ವೇದದಲ್ಲಿಯೇ ಅತ್ಯಂತ ತಾತ್ತ್ವಿಕ ವಿಚಾರಗಳನ್ನುಳ್ಳ ಸೂಕ್ತವೆಂದರೆ ಸೃಷ್ಟಿಗೆ ಸಂಬಂಧಿಸಿದುದು (10.129). ಇದು ಋಷಿ ಪ್ರಜಾಪತಿ ಪರಮೇಷ್ಟಿಗೆ ಅಂಕಿತವಾದದ್ದು. ಇದೆರಲ್ಲಿ ಏಳು ಮಂತ್ರಗಳುಂಟು. ಮೊದಲ ಎರಡು ಮಂತ್ರಗಳು ಸೃಷ್ಟಿಯ ಆದಿಯನ್ನು ಕುರಿತು ಅನೇಕ ಅಭಿಪ್ರಾಯಗಳನ್ನು ಮಂಡಿಸುತ್ತದೆ; ಈ ಸೂಕ್ತ ಈ ಅಭಿಪ್ರಾಯಗಳಿಗೆ (ದೃಷ್ಟಿಕೋನ) ಸಂಬಂಧಿಸಿಲ್ಲ, ಅದು ಈ ಕುರಿತು ಯಾವ ವಿಮರ್ಶೆಯನ್ನೂ ಮಾಡುವುದಿಲ್ಲ. ಋಷಿಯು ತನ್ನ ದರ್ಶನವನ್ನು ವ್ಯಕ್ತಪಡಿಸುತ್ತಿದ್ದಾನೆ. ಮೊದಲನೇ ಮಂತ್ರದ ಪೂರ್ವಾರ್ಧವು ಸತ್ (ಅಸ್ತಿತ್ವ), ಅಸತ್ (ಅನಸ್ತಿತ್ತ್ವ), ರಜಸ್ (ಚಲನಾ ತತ್ತ್ವ), ವ್ಯೋಮನ್ (ಆದಿಮ ಆಕಾಶ) ಗಳನ್ನು ಪ್ರಸ್ತಾಪಿಸುತ್ತದೆ. ಅದು ಈ ಕಲ್ಪನೆಗಳನ್ನು ಸಂಬಂಧಿಸಿ ಹೇಳುವುದಿಲ್ಲ. ಸೂಕ್ತ 10.72.2 ರಲ್ಲಿ ಸತ್ ಎಂಬುದು ಅಸತ್ ದಿಂದ ಜನಿಸಿತು ಎಂದು ವಿವರಿಸಿದೆ. ಮಂತ್ರ 10.5.7 ಹೇಳುವುದೇನೆಂದರೆ :-

ಅಸತ್ ಚ ಸತ್ ಚ ಪರಮೇ ವ್ಯೋಮನ್
ದಕ್ಷಸ್ಯ ಜನ್ಮನ್ ಆದಿತೇರ್ ಉಪಸ್ಥೇ

ಅವನು ಪರಮ ವ್ಯೋಮದಲ್ಲಿ ಸತ್ ಮತ್ತು ಅಸತ್ ಆಗಿದ್ದಾನೆ, ಅರಿವು (ದಕ್ಷ) ಜನಿಸುವಲ್ಲಿ, ಅಖಂಡ ಮಾತೆ ಅದಿತಿಯ ಮಡಿಲಲ್ಲಿ

ನಾವುಕೇವಲ” (Absolute) ಅಥವಾಆತ್ಯಂತಿಕ ತತ್ತ್ವ” (ultimate) ಎಂದು ಯಾವುದನ್ನು ಕರೆಯುತ್ತೇವೆಯೋ ಅದುತತ್ಎಂದು ಸೂಚಿತವಾಗಿದೆ; ಅದುಸತ್” (ಅಸ್ತಿತ್ವ) ಅಥವಾಅಸತ್” (ಅನಸ್ತಿತ್ವ)ಗಳ ಕಲ್ಪನೆಗೆ ಮೀರಿದ್ದಾಗಿದೆ. ಹಿಂದೂ ತತ್ತ್ವಶಾಸ್ತ್ರ ಚಿಂತನೆಯಲ್ಲಿ ಸತ್ ಮತ್ತು ಅಸತ್ ವಿರುದ್ಧಾರ್ಥಕ ಕಲ್ಪನೆಗಳಲ್ಲ ಎಂಬುದನ್ನು ಗಮನಿಸಬೇಕು. ಅದು ಏಕಃ ಎಂದು ಕರೆಯುತ್ತದೆ. ಆ ಏಕವು ತನ್ನದೇ ಸ್ವ-ಶಕ್ತಿ ಅಥವಾ ಸ್ವ-ಭಾವ(ಸ್ವಧಾ)ದ ಕಾರಣದಿಂದ ಇತ್ತು.

ಈ ಸೂಕ್ತದ ಏಳು ಮಂತ್ರಗಳು ಮೂರು ಖಂಡ (ಗುಂಪು)ಗಳಾಗಿ ವಿಂಗಡಣೆಯಾಗುತ್ತವೆ. ಮೊದಲನೇ ಖಂಡದಲ್ಲಿ 1 ಮತ್ತು 2 ನೇ ಮಂತ್ರಗಳು; ಎರಡನೇ ಖಂಡದಲ್ಲಿ 3, 4 ಮತ್ತು 5ನೇ ಮಂತ್ರಗಳು ಹಾಗೂ ಮೂರನೇ ಗುಂಪಿನಲ್ಲಿ 6 ಮತ್ತು 7ನೇ ಮಂತ್ರಗಳುಂಟು. ಇಡೀ ಸೂಕ್ತವು ಸೃಷ್ಟಿಯ ಪ್ರಾರಂಭವನ್ನು ಕುರಿತಾಗಿದೆ. ಸೃಷ್ಟ್ಯುದ್ಭವದ ಪ್ರಾರಂಭವೆಂದರೇನು ? ಎಂಬ ಪ್ರಶ್ನೆ ಉದ್ಭವಿಸುತ್ತದೆ. 1 ಮತ್ತು 2 ನೇ ಮಂತ್ರಗಳು ಕೆಲವು ಸಾಧ್ಯತೆಗಳನ್ನು ಪ್ರಸ್ತಾಪಿಸಿ ಅವುಗಳನ್ನು ತಳ್ಳಿಹಾಕುತ್ತದೆ. ಹೀಗೆ ತಳ್ಳಿಹಾಕಿದ ಸಾಧ್ಯತೆಗಳೆಂದರೆ - ಸತ್, ಅಸತ್, ರಜಸ್ (ಚಲನ ತತ್ತ್ವ), ಮತ್ತು ಪರಮ ವ್ಯೋಮ (ಪರಮ ಪದ). ನಮಗೆ ಗೋಚರವಾಗುವ ವಿಶ್ವವು ಗೂಢ ತಮಸ್ಸಿನ ಗರ್ಭದಲ್ಲಡಗಿದ ತಮಸ್ಸಿನಿಂದ ಹೊರ ಹೊಮ್ಮಿತು, ಸಕಲವನ್ನೂ ಆಚ್ಛಾದಿಸಿದ (ಒಳಗೊಂಡ) ಆಳವೂ ಗಹನವೂ ಆದ ಅಪ್ರಜ್ಞೆಯ (ಅಜ್ಞಾನತೆಯ) ಸಮುದ್ರದಿಂದ (ಅಪ್ರಕೇತಂ ಸಲಿಲಂ) ಅದು ಎದ್ದು ಬಂದಿತು ಎಂದು 3 ನೇ ಮಂತ್ರ ನಿರ್ದಿಷ್ಟವಾಗಿ ಹೇಳುತ್ತದೆ. ಈ ನಿರಾಕಾರ ವಸ್ತುವಿನಲ್ಲಿ ಎಲ್ಲ ವಸ್ತುಗಳೂ ವಿಚ್ಛಿನ್ನ ರೂಪದಲ್ಲಿ ಆಚ್ಛಾದಿತವಾಗಿದ್ದವು, ಅಡಗಿದ್ದುವು (ತುಚ್ಛ್ಯೇನ ಆಭು ಅಪಿಹಿತಂ), ಉಚ್ಛತರವಾದ, ಸ್ವಯಂ ಪ್ರಕಾಶಿಯಾದ ಶಕ್ತಿಯು ಈ ಸಮುದ್ರದಲ್ಲಿ ಅವತರಣಗೊಂಡು ಚಿದಂಶವುಳ್ಳ ತನ್ನ ಬೃಹತ್ತಾದ ಏಕತ್ವವನ್ನು ಪುನಾರಚಿಸಿಕೊಳ್ಳಲು ಈ ಸಮುದ್ರದಿಂದ ಮೇಲೆದ್ದು ಬರುವುದು ಎಂದು ವ್ಯಕ್ತವಾಗಿ ಹೇಳಿರದಿದ್ದರೂ, ಗೃಹೀತವಾಗಿದೆ ಎಂಬುದನ್ನು ಗಮನಿಸಬೇಕು. ಮೂರನೇ ಮಂತ್ರದಲ್ಲಿ ಹೇಳಿದ ಆಏಕವು, ತನ್ನ ಮಹಿಮೆಯಿಂದ ಈ ಜಗತ್ತನ್ನು ಸರ್ಜಿಸುವುದು (ತನ್ ಮಹಿಮಾ ಅಜಾಯತ). ಹೃದಯದಲ್ಲಿ ಅಭೀಪ್ಸೆಯನ್ನೂ, ಮನಸ್ಸಿನಲ್ಲಿ ವಿಚಾರವನ್ನೂ ಹೊಂದಿದ ಋಷಿಗಳು ಯಾವುದು ಅಸ್ತಿತ್ವವನ್ನು (ಸತ್) ರಚಿಸುವುದೋ ಅದನ್ನು ಆಅನಸ್ತಿತ್ವದಲ್ಲಿ ಕಂಡರು. ಜಡಪ್ರಜ್ಞೆಯ ಸಮುದ್ರದಿಂದ ಮೊದಲು ಮೇಲೆದ್ದು ಬಂದುದೇ ಈಅಸತ್”.

ತನ್ನೊಳಗೆ ಸಮಸ್ತ ವಿಶ್ವವನ್ನೂ ಮತ್ತು ಇನ್ನೂ ಪ್ರಕಟಗೊಂಡಿರದ ಸಾಧ್ಯತೆಗಳನ್ನೂ ತನ್ನ ಗೂಢಗರ್ಭದಲ್ಲಿ ಧರಿಸಿದ ಈ ಅಂಧಕಾರವೇ ಋಗ್ವೇದ 1.35.1 ರಲ್ಲಿರಾತ್ರಿಎಂದು ಕರೆಯಲ್ಪಟ್ಟಿರುವುದು. ಈ ಸಮುದ್ರದ ಮೇಲ್ಗಡೆಗೆ ಗಂತವ್ಯ (ಪ್ರಯತಿ) ಇದೆ, ಮತ್ತು ಮೇಲಕ್ಕೆ ಸೆಳೆಯುವ, ಅಂತಃಸ್ವಶಕ್ತಿ (ಸ್ವಧಾ) ಕೆಳಗಡೆ ಇರುವುದು.
ಕೊನೆಯ ಎರಡು ಮಂತ್ರಗಳು ( 6 ಮತ್ತು  7) ಪರತತ್ತ್ವದ ಸ್ವಭಾವವನ್ನು ಕುರಿತ ಪ್ರಶ್ನೆಯನ್ನೆತ್ತುತ್ತವೆ, ಮತ್ತುಅವನು ಇದನ್ನು ಅರಿತಿದ್ದಾನೆಹಾಗೂಅರಿತಿಲ್ಲಎಂದು ಮುಕ್ತಾಯಗೊಳ್ಳುತ್ತದೆ. 
ಅವನು ಇದನ್ನು ಅರಿತಿದ್ದಾನೆಅಥವಾ ಅವನು ಅರಿತಿಲ್ಲಎಂಬುದು ಸಾಮಾನ್ಯವಾಗಿ ಮಾಡಲಾಗುವ ಅನುವಾದ.
ಇಡೀ ವೇದದಲ್ಲಿ ಅಂಥ ಸಂದೇಹಕ್ಕೆ ಆಸ್ಪದವಿಲ್ಲ. ಅಥವಾ ಎನ್ನುವುದು ಎಲ್ಲ ಸಂದರ್ಭದಲ್ಲಿಯೂ ಒಂದರಿಂದ ಇನ್ನೊಂದನ್ನು ಹೊರಗಿಡುವ ಅರ್ಥವಲ್ಲ, ಎಂಬುದು ಸಾಮಾನ್ಯ ತಿಳುವಳಿಕೆ. ಅದು ಉಭಯವ್ಯಾಪಕ ಅರ್ಥವನ್ನೂ ಕೊಡಬಲ್ಲದು.

ಶ್ಲೋಕ - 1 - ಸಂಸ್ಕೃತದಲ್ಲಿ :

ನಾಸದಾಸೀನ್ನೋಸದಾಸೀತ್ತದಾನೀಂನಾಸೀದ್ರಜೋ ನೋ ವ್ಯೋಮಾಪರಯೋತ್
ಕಿಮಾವರೀವಃ ಕುಹಕಸ್ಯಶರ್ಮನ್ನಂಭಃಕಿಮಾಸೀದ್ಗಹನಂ ಗಭೀರಂ
ಕನ್ನಡದಲ್ಲಿ :

ಆಗಲ್ಲಿ ಅಸತ್ತಿರಲಿಲ್ಲ, ಇರಲಿಲ್ಲ ಸತ್ತೂ
ವಾಯುವೂ ಅದರಾಚೆಗಿನಾಕಾಶವೂ ಇಲ್ಲ
ಯಾವುದಾಚ್ಛಾದಿಸಿತ್ತದನು ಆ ವೈಶ್ವಜಲವ
ಗಹನ ಗಭೀರದಲದೆಲ್ಲಿತ್ತು ಯಾರ ವಶದಲ್ಲಿ ?

ಶ್ಲೋಕದ ಅರ್ಥ / ತಾತ್ಪರ್ಯ :

ಸೃಷ್ಟಿಗೆ ಮುಂಚೆ ಶೂನ್ಯತೆ ಇರಲಿಲ್ಲ ಹಾಗೂ ಜೀವಿಯ ಅಸ್ತಿತ್ತ್ವವೂ ಸಹ, ಚಲನೆಯ ಆಧಾರತ್ತ್ವವಾದ ಉಸಿರಾಟವೂ (ವಾಯುವೂ) ಇರಲಿಲ್ಲ, ಮತ್ತೆ ಆಕಾಶದಾಚೆಗೆ ಯಾವುದೇ ಸ್ವರ್ಗವೂ ಇರಲಿಲ್ಲ. ಎಲ್ಲವನ್ನೂ ಯಾವುದು ಆವರಿಸಿತ್ತು ಮತ್ತು ಎಲ್ಲಿ? ಆಶ್ರಯಿಸಿ ನಿಲ್ಲುವ ಸ್ಥಾನವಾದರೂ ಏನಿತ್ತು? ತೇಜೋಮಯ ಊರ್ಜೆ ಎಂಬುದಾದರೂ ಏನಿತ್ತು? ಗಹನ, ಗಭೀರ !
ಯಾವುದು ಒಳಗೊಂಡಿದೆ ಮತ್ತು ಯಾವುದು, ಎಲ್ಲಿ ಹಾಗೂ ಯಾರ ರಕ್ಷಣೆಯಲ್ಲಿ; ಮತ್ತು ಆಳವರಿಯದ ಅಗಾಧ ಜಲವು ಇದ್ದಿತ್ತೇ?
ರಜಸ್ : ಸಾಮಾನ್ಯವಾಗಿ ಇದನ್ನು ಅಂತರಿಕ್ಷವೆಂದು ಕರೆಯಲಾಗುತ್ತದೆ. ಏನೇ ಇದ್ದರೂ ಅದು ಚಿತ್ (ಚೇತನ) ಶಕ್ತಿಯಿಂದುಂಟಾದ ಗತಿತತ್ತ್ವ. ಸಾಂಖ್ಯರ ಪ್ರಕಾರ ಅದು ಮೂರು ಗುಣಗಳಲ್ಲಿ (ತಮಸ್, ರಜಸ್, ಸತ್ತ್ವ) ಒಂದು. ಈ ಮೂರೂ ಗುಣಗಳನ್ನು ಮೈತ್ರಾಯಣೋಪನಿಷತ್ತಿನ 16 ನೇ ಅಧ್ಯಾಯದಲ್ಲಿ ಹೆಸರಿಸಲಾಗಿದೆ.
ಸತ್ ಮತ್ತು ಅಸತ್ : ನಾಲ್ಕನೆಯ ಮಂತ್ರವು ಸತ್ ಎಂಬುದು ಅಸತ್ ನಿಂದ ನಿರ್ಮಿತವಾಯಿತು ಏಂಬುದನ್ನು ಗಮನಿಸಿ.
ವ್ಯೋಮ : ಇದು ಆಕಾಶ ಅಥವಾ ಅವಕಾಶ.

ಆವರೀವಃ - ಯಾವುದು ಆಚ್ಛಾದಿಸಿತ್ತು ? ಉಪನಿಷತ್ತು ಮತ್ತು ವೇದಗಳಲ್ಲಿ ಅಂತಿಮ ಸತ್ಯವನ್ನು ವಿಶ್ವವು ಆಚ್ಛಾದಿಸಿದೆಯೆಂದು ಗ್ರಹಿಸಲಾಗಿದೆ. ಋಗ್ವೇದ (5.62.1) - ಋತೇನ ಋತಂ ಅಪಿಹಿತಮ್ - ಋತವು ಋತದಿಂದ ಮುಚ್ಚಲ್ಪಟ್ಟಿದೆ, ಎಂಬುದನ್ನು ಗಮನಿಸಿ. ಈಶಾವಾಸ್ಯೋಪನಿಷತ್ತಿನಲ್ಲಿ (15) “ಅಪಾವೃಣುಎಂದಿರುವುದನ್ನು ಸ್ಮರಿಸಬಹುದು.

ಶರ್ಮನ್ : ಶತಪಥ ಬ್ರಾಹ್ಮಣದಲ್ಲಿ (3.2.1.8) ಇದನ್ನು ಚರ್ಮಕ್ಕೆ ಸಂಬಂಧಿಸಿ ಹೇಳಲಾಗಿದೆ. ಅದರ ಅರ್ಥ ವಿಶ್ರಾಮಸ್ಥಾನ. ಚರ್ಮವು ಅಸ್ಥಿ, ಮಾಂಸಗಳನ್ನು (ಆಚ್ಛಾದಿಸಿ) ಮುಚ್ಚಿದ (ಆಶ್ರಯ ನೀಡಿದ) ಹಾಗೆ, ಸತ್ಯಕ್ಕೆ ಯಾವುದು ಆಶ್ರಯ ನೀಡಿದೆ (ಆವರಿಸಿದೆ) ಎಂಬುದು ಇಲ್ಲಿಯ ಪ್ರಶ್ನೆ. ಯಾವುದು ಆಶ್ರಯ ಕೊಡುವುದೋ ಅದು ಶರ್ಮನ್.
ಕೊನೆಯಲ್ಲಿ, ಈ ಮಂತ್ರವು ಸೃಷ್ಟ್ಯುದ್ಭವ ಕ್ರಿಯೆಯ ಮೊದಲ ಹೆಜ್ಜೆ ಅಂಭಃ (ಸಲಿಲ) ಎಂದು ಹೇಳುತ್ತದೆ.

ವ್ಯಾಖ್ಯಾನ :
ಸತ್ (ಅಸ್ತಿತ್ತ್ವವು) ಅಗೋಚರವಾದದ್ದು ಮತ್ತು ಅಸತ್ ಗೋಚರವಾಗುವ ಇರುವಿಕೆ; ಇವುಗಳೇ ಸಾಂಖ್ಯ ಸಿದ್ಧಾಂತದ ಪ್ರಕಾರಪುರುಷಮತ್ತುಪ್ರಕೃತಿ”. ಆದರೆ ವೈದಿಕ ವ್ಯವಸ್ಥೆಯ ಪ್ರಕಾರ ಸೃಷ್ಟಿ ಕ್ರಿಯೆಯಲ್ಲಿ ಒಂದು ಅಗೋಚರ, ಅಪ್ರತಿಮ, ಗ್ರಹಿಸಲಾಗದ ಮೊದಲ ಕಾರಣ ಅಥವಾ ಬ್ರಹ್ಮದಲ್ಲಿ ಮಿಶ್ರಿತವಾಗುತ್ತಾರೆ ಮತ್ತು ಕಳೆದುಹೋಗುತ್ತಾರೆ. 

ಶ್ಲೋಕ - 2 - ಸಂಸ್ಕೃತದಲ್ಲಿ :

ನ ಮೃತ್ಯುರಾಸೀದಮೃತಂ ನ ತರ್ಹಿ ನ ರಾತ್ರ್ಯಾ|ಅಹ್ನಆ ಅಸೀತ್ಪ್ರಕೇತಃ
ಆನೀದವಾತಂ ಸ್ವಧಯಾ ತದೇಕಂ ತಸ್ಮಾದ್ಧಾನ್ಯನ್ನಪರಃ ಕಿಂಚನಾಸ


ಕನ್ನಡದಲ್ಲಿ :

ಮೃತ್ಯುವಿರಲಿಲ್ಲ ಅಮೃತತ್ವವೂ ಇಲ್ಲ
ಹಗಲು ರಾತ್ರಿಗಳ ದೀವಟಿಗೆಯಿರಲಿಲ್ಲ
ಏಕವದುಸುರಿತ್ತು ವಾಯುವಿರದೆ
ತಾನೆ ತಾನಾಗಿತ್ತು ಆಗೊಂದೆ ಇನ್ನೊಂದೆಂಬುದಿರಲಿಲ್ಲ





ಪದಗಳ ಅರ್ಥ:

ಮೃತ್ಯು - ಸಾವುಗಳು; ಆಸೀದ - ಆರಂಭ; ತರ್ಹಿ - ಆ ಸಮಯದಲ್ಲಿ, ನಂತರ, ಆ ಸಂದರ್ಭದಲ್ಲಿ, ಆದ್ದರಿಂದ, ಆ ಕಾರಣದಿಂದಾಗಿ;
ಅನಾಹಃ - ಊತ, ಬಂಧಿಸುವ; ಅನಿಲ - ನಿಂದ ಮುಂದುವರಿಯುವುದಕ್ಕೆ ಅಥವಾ ಗಾಳಿ ನಿರ್ಮಾಣದ; ಸ್ವಧಯ - ಒಬ್ಬರ ಸ್ವಭಾವ ಅಥವಾ ಸಂತೋಷ ಪ್ರಕಾರ, ಸ್ವಯಂ ಮುಕ್ತವಾಗಿ, ಸ್ವಯಿಚ್ಛೆಯಿಂದ; ತದ್ - ; ಏಕಂ - ಒಂದು; ತಸ್ಮಾತ್ - ಆದ್ದರಿಂದ; ಅನ್ಯಾ - ಮತ್ತೊಂದು, ವಿರುದ್ಧವಾಗಿ; ಪ್ಯಾರಾ - ಪರಮ, ಅತ್ಯುನ್ನತ, ಹಿಂದಿನ ಅಥವಾ ಮುಂದಿನ; ಚನಸ್ - ಪರಮಾನಂದ, ತೃಪ್ತಿ; ಆನಂದ ಅನುಭವಿಸಲು ಕಾಪಾಡಿಕೊಂಡರು.
ಪಠ್ಯತಸ್ಮಾದ್ಧ್ಯಾನ್ಯತ್ರಪರಃ ಕಿಂವಾಚ್ಯಾರ್ಥವು "ಚನಾಸ” “ಸರ್ವೋಚ್ಚ ಮತ್ತೊಂದು ಯಾವುದೂ, (ಆದ್ದರಿಂದ) ಅದಕ್ಕಾಗಿಯೇ ಸಂತೋಷ, ಆದ್ದರಿಂದ?” ಬಹುಷಃ ಪರಮಾನಂದದ ಬಗ್ಗೆ ಪ್ರಶ್ನೆಯನ್ನು ಇದು ಎಂದು ಸೂಚಿಸುತ್ತದೆ, ಸ್ವಯಂ ಸಂತೋಷಪಡಿಸುತ್ತಾ ಇತ್ತು ಆದರೂ ಯಾವುದು ಬೇರೆ ಇದು?
ಆತ್ಮದಿಂದ ಹುಟ್ಟಿದ ಅತೀಂದ್ರಿಯ ವೈಭವದ ಅತ್ಯುನ್ನತ ರೂಪವಾಗಿದೆ. ಅದಕ್ಕಾಗಿಯೇ ವಿವೇಕಾನಂದರು ವೈಭವ ಅರ್ಥವನ್ನು ಪಡೆಯುತ್ತಾರೆ.
ತಾತ್ಪರ್ಯ :

ಯಾವುದೇ ಮರಣ, ಮತ್ತು ಆದ್ದರಿಂದ ಅಮರತ್ವವೂ ಇಲ್ಲ. ದಿನ - ರಾತ್ರೆಗಳ ಬಗ್ಗೆ ಯಾವುದೇ ಸೂಚನೆ ಇರಲಿಲ್ಲ. ಅವರು ತಮ್ಮದೇ ಆದ ಶಕ್ತಿಯಿಂದ ಗಾಳಿಯಿಲ್ಲದೇ ಉಸಿರಾಡಿದರು. ಅದಕ್ಕಿಂತಲೂ ಹೆಚ್ಚಿನದು ಅದರಾಚೆಗೆ ಅಸ್ತಿತ್ತ್ವದಲ್ಲಿತ್ತು.

ವ್ಯಾಖ್ಯಾನ :

ಅಮೃತ ಮತ್ತು ಮೃತ್ಯು ಇವೆರಡೂ ಕಲ್ಪನೆಗಳು ಪರಸ್ಪರ ನಿಕಟ ಸಂಬಂಧವನ್ನುಳ್ಳವು, ಮತ್ತು ಒಂದರಿಂದೊಂದು ಪೃಥಕ್ ಅಲ್ಲ (ಹೊರತಲ್ಲ). ಶತಪಥ ಬ್ರಾಹ್ಮಣ (10.5.24) ವು ಅಮೃತವು ಮೃತ್ಯುವಿನಲ್ಲಿ ಸ್ಥಿತವಾಗಿದೆ ಹಾಗೂ ಮೃತ್ಯುವು ಅಮೃತದಲ್ಲಿ ಸ್ಥಿತವಾಗಿದೆ ಎಂದು ಹೇಳುತ್ತದೆ. ದೇವ, ಭೂತ; ಶಕ್ತಿ - ದ್ರವ್ಯ; ದೈವಿಕ - ಮಾನವ; ದೇಶಕಾಲಾತೀತ - ದೇಶಕಾಲಾವಚ್ಛಿನ್ನ, ಸ್ಥಿರ, ಸ್ಥಿತಿ-ತತ್ತ್ವ, (ವಿಶ್ರಾಂತ ಸ್ಥಿತಿ) - ಗತಿ- ತತ್ತ್ವ; ಇವುಗಳು ಪರಸ್ಪರ ಸಂಬಂಧಿತ ಯತಿಗಳು. ಅದಿತಿ ಮತ್ತು ಮಾರ್ತಾಂಡ ಕುರಿತು (10.72)ರಲ್ಲಿ ವಿವರಿಸಲಾಗಿದೆ. ಶತಪಥ ಬ್ರಾಹ್ಮಣದ ಪ್ರಕಾರ (10.5.14) ಸೂರ್ಯನು ಅಮೃತತ್ವದ  ವಲಯ ಹಾಗೂ ಮೃತ್ಯುವಿನ ವಲಯಗಳನ್ನು ಬೇರ್ಪಡಿಸುವ, ಅಮೃತ-ಮೃತ್ಯುಗಳ ನಡುವಿನ ಗಡಿರೇಖೆಯ ಚಿನ್ಹೆ.

ಅಹೋರಾತ್ರ : ಹಗಲು ಮತ್ತು ರಾತ್ರಿ. ಇಲ್ಲಿ ಕಾಲವು ಮೂಲ ಕಲ್ಪನೆ. ಸೃಷ್ಟ್ಯುದ್ಭವದಲ್ಲಿ ಕಾಲವೂ ಕೂಡಾ ಸಿದ್ಧಾಂತಕ್ಕೋಸ್ಕರ ಪ್ರಥಮ ಪಾದವಲ್ಲವೆಂದೂ ಋಗ್ವೇದವು ಹೇಳುತ್ತದೆ. ಕಾಲತತ್ತ್ವದ ಶಾಸ್ತ್ರೀಯ ಸಿದ್ಧಾಂತಕ್ಕೋಸ್ಕರ ಅಥರ್ವವೇದ (19.53.14)ನ್ನು ನೋಡಿ.

ಏಕಂ : ಕೊನೆಯದಾಗಿ, ಒಂದುಮುಖ್ಯ ಕಾರ್ಯವಾಹಕವೆಂದು ಹೇಳುತ್ತದೆ. ಅವನುಶ್ವಾಸರಹಿತನಾಗಿಯೂ ಉಸಿರಾಡುತ್ತಾನೆ. ಶ್ವಾಸೋಚ್ಛ್ವಾಸದಲ್ಲಿಚಲನೆಇರುವುದೆಂಬುದನ್ನು ಗಮನಿಸಿ. ಅಲ್ಲಿ ಚಲನೆಯ ಕಲ್ಪನೆ ಇನ್ನೂ ಇಲ್ಲ. ಆದರೂ ಪ್ರಾಣಶಕ್ತಿ ಇದೆ; ಕಾರಣವೇ ಅವನು ಜೀವಿಸುತ್ತಾನೆ (ಅನೀತ್) ಎಂಬ ಪದದ ಪ್ರಯೋಗವಿದೆ. ಅದಾಗುವುದು ಹೇಗೆ ? ಅದು ಸಾಧ್ಯವೇ ? ಏಕವು ತನ್ನ ಅಂತರ್ನಿಹಿತ ಶಕ್ತಿಯಿಂದ ಅಥವಾ ಸ್ವಾಂ-ವ್ಯವಸ್ಥಿತಗೊಳ್ಳುವ ಶಕ್ತಿಯಿಂದ (ಸ್ವ-ಧರ್ಮದಿಂದ)(ಸ್ವಧಾ), ಹಾಗೆ ಮಾಡುತ್ತದೆಯೆಂದು ಉಪನಿಷತ್ತು ಹೇಳುತ್ತದೆ. ಏಕವನ್ನು ಹೊರತುಪಡಿಸಿ ಮತ್ತೇನೂ ಇಲ್ಲ.

ಶ್ಲೋಕ - 3 - ಸಂಸ್ಕೃತದಲ್ಲಿ :

ತಮ|ಆಅಸೀತ್ತಮಸಾ ಗೂಹ್ಳಮಗ್ರೇ ಪ್ರಕೇತಂ
ಸಲಿಲಂಸರ್ವಮಾsಇದಂ |
ತುಚ್ಛ್ಯೇನಾಭ್ವಪುಹಿತಂ ಯದಾಸೀತ್ತಪಸಸ್ತನ್ಮಹಿನಾ ಜಾಯತೈಕಂ
ಕನ್ನಡದಲ್ಲಿ :

ಸುತ್ತಿತ್ತು ಮೊದಲಲ್ಲಿ ತಮವು ತಮದಲ್ಲಿ
ಎಲ್ಲೆಲ್ಲು ಕೇವಲ ಗಾಢಗಪ್ಪು ಸಲಿಲ
ತಪದ ಶಕ್ತಿಯಲಿ ಕೊನೆಯಲುದ್ಭವಿಸಿದ
ಆ ಏಕವನು ಆವರಿಸಿತ್ತು ಶೂನ್ಯ

ಪದಗಳ ಅರ್ಥ :

ಮೊದಲಿಗೆ ಅಂಧಕಾರದಲ್ಲಿ ಕತ್ತಲು ಪ್ರಕೇತವಾಗಿ ಸುತ್ತಿಕೊಂಡು ಗಾಢವಾದ ಕಪ್ಪು ದಶದಿಕ್ಕುಗಳಲ್ಲೂ ಆವರಿಸಿಕೊಂಡಿದೆ. ನೀರು ಎಲ್ಲೆಲ್ಲೂ ಹಾಗೂ ಎಲ್ಲೆಡೆಯೂ ಆವರಿಸಿಕೊಂಡಿದೆ.

ತಾತ್ಪರ್ಯ :
ಕಗ್ಗತ್ತಲೆಯು ಮೊದಲೇ ಆವರಿಸಿದ ಕಾರ್ಗತ್ತಲೆಯಿಂದ ಆವೃತವಾಗಿದೆ. ಈ ಕಾರ್ಗತ್ತಲೆಯಲ್ಲಿ ನೀರು ಗುರುತು ಸಿಗದಂತೆ ಆವರಿಸಿದೆ. ಅಲ್ಲಿರಬೇಕಾದ್ದು, ಕೇವಲ ಅದು ತಪಸ್ಸಿನ ಶಾಖದಿಂದ ಸೃಷ್ಟಿಯಾಗಿ ಶೂನ್ಯದಿಂದಾವೃತವಾಗಿದೆ.
ಸಂಯಮ ಶಕ್ತಿಯ ಮೂಲಕತಪಸ್ತಪಸ್ಸು ಅಲ್ಲ ಎಂದು ಅರ್ಥೈಸಲಾಗುತ್ತದೆ, ಆದರೆ ಸೃಷ್ಟಿ ಕ್ರಿಯೆಯ ಚಿಂತನೆ.
ಯಃ ಸರ್ವಜ್ಞ ಸಾ ಸರ್ವ ವಿದ್ವಾನ್ ಯಸ್ಯ ಜ್ಞಾನ ಮಯಂ ತಪಃ  
 - ಮುಂಡಕೋಪನಿಷತ್ (1.1.9)

ವ್ಯಾಖ್ಯಾನ :

ಪ್ರಾರಂಭದಲ್ಲಿತಮದಲ್ಲಿ ತಮವು ಗೂಢವಾಗಿ ಅಡಗಿತ್ತು, ಅಷ್ಟೆ. ಎಲ್ಲವೂ ಒಂದು ಸಮುದ್ರವಾಗಿತ್ತು, ಅದರಲ್ಲಿ ಮಾನಸ ಪ್ರಜ್ಞೆ ಇರಲಿಲ್ಲ, (ಅಪ್ರಕೇತಂ); ಪ್ರಜ್ಞೆಯು (ಅಲ್ಲಿ) ಭಿನ್ನಭಿನ್ನವಾಗಿದ್ದ ಕಾರಣ (ತುಚ್ಛ್ಯೇನ), ನಿರಾಕಾರ ಸತ್ತೆಯಲ್ಲಿ (ಆಭು) ಎಲ್ಲವೂ ಅಡಗಿತ್ತು (ಅಪಿಹಿತಂ). ತನ್ನದೇ ಆದ ಊರ್ಜೆಯ ಮಹಿಮೆಯಿಂದ, “ಏಕವು ಆ ಸಮುದ್ರದಿಂದ ಉದ್ಭವಿಸಿತು.
ತಮಃ - ಅಂಧಕಾರ; ಗೂಳ()ಮ್ - ರಹಸ್ಯವಾಗಿದ್ದುದು; ಗೂಢ; ಮಹಿನ - ಮಹಿಮೆ; ಅಜಾಯತ - ಹುಟ್ಟಿತು.
ಸಲಿಲ - ಇದು ಸಾಮಾನ್ಯಾರ್ಥದ ನೀರು ಆಗಿರಲು ಸಾಧ್ಯವಿಲ್ಲ, ಏಕೆಂದರೆ, (10.129.21) ರಲ್ಲಿ, ಅಲ್ಲಿ ಬೇರೇನೂ ಇರಲಿಲ್ಲ ಎಂದು ಹೇಳುತ್ತದೆ. “ಸಲಿಲವು ಪ್ರವಹಿಸುತ್ತಿರುವ ಶಕ್ತಿಯನ್ನು ಸೂಚಿಸುತ್ತದೆ. (ಅಂಭಃ ಶಬ್ದದಂತೆ) ಅದನ್ನು ಇಲ್ಲಿ ಸಮುದ್ರ ಎಂದು ಅನುವಾದಿಸಲಾಗಿದೆ.

ಈ ಮಂತ್ರವು ಸೃಷ್ಟಿಯ ಆದಿಯನ್ನು ವರ್ಣಿಸುತ್ತದೆ. ಯಾವುದೇ ವ್ಯವಸ್ಥೆ (ಕ್ರಮ) ಇಲ್ಲದೆ ನಿರಂತರ ಚಲನೆ (ಕ್ಷೋಭೆ)ಯಲ್ಲಿರುವುದು ಅಸತ್, ಕಾರಣವೇನೆಂದರೆ ಪ್ರಜ್ಞೆಯು ಹೇಗೋ (ತಂತಾನೇ) ಛಿನ್ನ-ಭಿನ್ನವಾಗಿತ್ತು (ತುಚ್ಛ್ಯೇನ). ಅಸತ್ ನಲ್ಲಿ ಕೇವಲ ಪ್ರಾಣದ ಚಟುವಟಿಕೆ ಮಾತ್ರ ಇರುವುದು. ಆದರೆ, ವ್ಯವಸ್ಥೆಯನ್ನು ಉಂಟುಮಾಡಬಹುದಾದ ಮನಸ್ - ಇರುವುದಿಲ್ಲ. ಎಲ್ಲವೂ ಅಡಗಿತ್ತು (ಸುಪ್ತವಾಗಿತ್ತು). ಆಗ, ತನ್ನದೇ ಊರ್ಜೆಯಿಂದಪರಾತ್ಪರ” “ಏಕವು ಉದ್ಭವಿಸಿತು.
ಮೊದಲನೇ ಪಂಕ್ತಿಯು ಮೈತ್ರಾಯಣೋಪನಿಷತ್ತಿನಲ್ಲಿ ಕೂಡಾ ಬಂದಿದೆ - ಅಧ್ಯಾಯ 16 ವೀಕ್ಷಿಸಿ.

ಶ್ಲೋಕ - 4 - ಸಂಸ್ಕೃತದಲ್ಲಿ

ಕಾಮಸ್ತದಗ್ರೇ ಸಮವರ್ತತಾಧಿ ಮನಸೋ ರೇತಃ ಪ್ರಥಮಂ ಯದಾಸೀತ್
ಸತೋಬಂಧುಮಸತಿ ನಿರವಿಂದನ್ಹೃದಿ ಪ್ರತೀಷ್ಯಾ ಕವಯೋ ಮನೀಷಾ
ಕನ್ನಡದಲ್ಲಿ :

ಅವತರಿಸಿತಾದಿಯಲಿ ಸಂಕಲ್ಪವದು
ಅದೆ ಮನದಲುದಿಸಿದ್ದ ಮೂಲಬೀಜ
ಜ್ಞಾನದಿಂ ತಮ್ನೆದೆಯೊಳಗನರಸಿದ
ಕಾವ್ಯರ್ಷಿಗಳಿಗರಿವಿತ್ತು-ಸ್ನೇಹಿಯಾವುದು ಯಾವುದಲ್ಲ

ತಾತ್ಪರ್ಯ :

ಮೊದಲು ಆಲೋಚನೆಯು ಪ್ರಥಮ ಕ್ರಮಾಂಕದಲ್ಲಿ ಆತನಲ್ಲಿಇದು ಅಪೇಕ್ಷಿಸಿದ್ದು ಎಂದು”; ತಮ್ಮ ಹೃದಯದಲ್ಲಿ, ತಮ್ಮ ಬುದ್ಧಿವಂತಿಕೆಯೊಂದಿಗೆ ಹುಡುಕುತ್ತಾ, ಋಷಿಗಳು ತಮ್ಮ ಬಂಧಗಳನ್ನು ಅಸ್ತಿತ್ವದಲಿಲ್ಲದವರಾಗಿ ಕಂಡುಕೊಂಡಿದ್ದಾರೆ.

ಸ್ವಾಮಿ ವಿವೇಕಾನಂದರು ತಮ್ಮ ಲೇಖನದಲ್ಲಿ ವಿವರಿಸಿದಂತೆ, “ಚಿತ್ತದಲ್ಲಿ (ಬಯಕೆಯಿಂದಾಗಿ) ಉಂಟಾಗುವ ಕಂಪನಗಳೇ ಆ ಮನಸ್ಸು”. ಚಿತ್ತವು ಇಚ್ಛೆಯಿಂದಾಗಿ ಕಂಪನಗಳನ್ನು ಉಂಟುಮಾಡಿತು. “ಮನಸ್ಸಿನ ದೂರದಲ್ಲಿ ಭಾವನೆಯನ್ನು ಹೊಂದಿದೆ, ಮತ್ತು ಅದನ್ನು ನಿರ್ಣಯಿಸುವ ನಿರ್ಣಾಯಕ ಬೋಧಕವರ್ಗ, ಬುದ್ಧನಿಗೆ ಬದ್ಧವಾಗಿದೆ. ಬುದ್ಧಿಯ ಹಿಂದೆ ಅಹಂಕಾರವಿದ್ದು ಅದರ ಹಿಂದೆ ಮಹತ್, ಪ್ರಕೃತಿಯ ಅತ್ಯುನ್ನತ ರೂಪವಾಗಿರುವ ಬೌದ್ಧಿಕತೆ. ಪ್ರತಿಯೊಂದು ಮುಂದೆ ಬರುವುದರ ಪ್ರಭಾವ.
ಬಂಧುಮಸತಿ ಬಹುಷಃಸಂಬಂಧಿತ ಅಸ್ತಿತ್ವವೇ ಆಗಿದೆ.
ವಿಂಧುಎಂಬುದು ಮೂಲಭೂತ ಬೀಜದ ಬಿಂದು. ಇದು ಹುಡುಕುವ / ಪಡೆದುಕೊಳ್ಳುವ ಎಂದೂ ಅರ್ಥೈಸಬಹುದು. ಹಾಗಾಗಿ ಸಂಬಂಧವಿಲ್ಲದ ಅಸ್ತಿತ್ತ್ವದ ಅಸ್ತಿತ್ತ್ವವನ್ನು ಅವಲಂಬಿಸಿರುವ ಅಸ್ತಿತ್ತ್ವವನ್ನು ನಿವಾರಿಸುವುದು.
ಕವಿಒಬ್ಬ ಬುದ್ಧಿವಂತನಾದ ಋಷಿ. ಇವನಿಗೆ ತೀಕ್ಷ್ಣವಾದ ಬುದ್ಧಿಶಕ್ತಿ ಹಾಗೂ ಸೂಕ್ಷ್ಮ ದೃಷ್ಟಿಗಳು ಸಹಜ ಪ್ರತಿಭೆಯಾಗಿ ಒದಗಿದೆ, ಹಾಗೂ ಈತನು ಪ್ರಬುದ್ಧ.  ಆದ್ದರಿಂದ ಈತನು ವೈದಿಕ ಋಷಿಗಳನ್ನು ಪ್ರತಿನಿಧಿಸುತ್ತಾನೆ.
ಮನಿಷಾ ಎಂಬ ಸುಂದರ ಪದವುಆಲೋಚನೆ, ಪ್ರತಿಫಲನ, ಪರಿಗಣನೆ, ಜಾಣ್ಮೆ, ಕಲ್ಪನಾ, ಕಲ್ಪನೆ ಎಂಬ ಅರ್ಥಗಳನ್ನು ಸೂಚಿಸುತ್ತದೆ.
ಪ್ರತಿಷ್ಯಾ ಎಂದರೆಧೃಢವಾಗಿ ಹೃದಯದಲ್ಲಿ ನಿಂತಿರುವ”. ಈ ರೀತಿಯಾಗಿ ಕವಿಯು ತನ್ನ ಜಾಣ್ಮೆಗೆ ಹಾಗೂ ತನ್ನ ಹೃದಯದೊಳಗೆ ನೋಡುತ್ತಿರುವ ಪ್ರತಿಫಲಿಸಿದ ಹಾಗೂ ಬ್ರಹ್ಮ ಧೃಢವಾಗಿ ನಿಂತು ಐಕ್ಯತಾ ಕಲ್ಪನೆಯನ್ನು ಅವನ ಹೃದಯದಲ್ಲಿ ಪ್ರಕಾಶಿಸುತ್ತಿರುವನು.

ವ್ಯಾಖ್ಯಾನ :

ಆದಿಯಲ್ಲಿ ಕಾಮ ಉದ್ಭವಿಸಿತು (ಸಮವರ್ತತ), ಅದು ಮನಸ್ಸಿನ ಆದಿಮ ಬೀಜ (ರೇತಸ್), ಅದೇ ಮೊದಲನೆಯದು. ಜ್ಞಾನದ ಅಧಿಕಾರ ಹೊಂದಿದವರು (ಕವಿಗಳು) ಸತ್ ನ್ನು (ಅಸ್ತಿತ್ವವನ್ನು) ಯಾವುದು ರಚಿಸುವುದೋ (ಬಂಧುಂ) ಅದನ್ನು ಅಸತ್ ನಲ್ಲಿ ಕಂಡರು. ಅವರು ಅದನ್ನು ಹೃದಯದ ಉದ್ದಿಷ್ಟ ಪ್ರೇರಣೆ (ಪ್ರತೀಷ್ಯಾ) ಮತ್ತು ಮನಸ್ಸಿನ ಆಲೋಚನೆಯಿಂದ (ಮನೀಷಾ) ಕಂಡರು.
ಸತ್ ನ್ನು ಯಾವುದು ರಚಿಸುವುದೋ, ಕಟ್ಟಿನಿಲ್ಲಿಸುವುದೋ, (ಬಂಧುಂ) ಅದನ್ನು ಋಷಿಗಳು ಜಡಪ್ರಜ್ಞೆಯ ಸಮುದ್ರದಲ್ಲಿ (ಅಸತ್ ನಲ್ಲಿ) ಕಂಡರು ಎಂದು ಈ ಮಂತ್ರ ಹೇಳುತ್ತದೆ. ಸಾಮಾನ್ಯವಾಗಿ ಬಂಧುಂ ಎಂಬುದನ್ನು ಸಹಜಾತ ಎಂದು ವಿವರಿಸಲಾಗುತ್ತದೆ. ಆದರೆ, “ರಚಿಸುವುದಕ್ಕೆಎಂದು ನಿರುಕ್ತಿ ಮಾಡುವುದು ಹೆಚ್ಚು ಸರಿಯಾದದ್ದು. ಅಸತ್ ದಿಂದ ಸತ್ ಉದ್ಭವಿಸಿತೆಂಬ ಕಲ್ಪನೆ ವೇದದಲ್ಲಿ ಬೇರೆಡೆಯೂ ಇದೆ. ಹೃದಯದಲ್ಲಿರುವ ಶಕ್ತಿಯನ್ನು ಅವರು ಪ್ರೇರಣೆ (ಈಷ) ಎಂದೂ, ಮನಸ್ಸಿನಲ್ಲಿರುವ ಶಕ್ತಿಯನ್ನು ಮನೀಷಾ ಎಂದೂ ಕಂಡರು. ಹೃದಾ, ಮನಸಾ, ಮನೀಷಾ - ಈ ವೈದಿಕ ತ್ರಯವು ಋಗ್ವೇದ (1.61.2) ರಲ್ಲಿ ಮತ್ತು ಕಠೋಪನಿಷತ್ತಿನ (2.3.9) ಲ್ಲಿಯೂ ಬರುತ್ತದೆ.

ಶ್ಲೋಕ - 5 - ಸಂಸ್ಕೃತದಲ್ಲಿ :
ತಿರಶ್ಚೀನೋ ವಿತತೋ ರಶ್ಮಿರೇಷಾಮಧಃ
ಸ್ವಿದಾಸೀದುಪರಿಸ್ವದಾಸೀತ್
ರೇತೋಧಾ|ಆಅಸನ್ಮಹಿಮಾನ|
ಆಅಸಂತ್ವಧಾ|ಆವಸ್ತಾತ್ಪ್ರಯತಿಃಪರಸ್ತಾತ್
ಕನ್ನಡದಲ್ಲಿ :
ಶೂನ್ಯದುದ್ದಗಲಕ್ಕೆ ಹಿಗ್ಗಿಸಿ ಜ್ಞಾನರಶ್ಮಿ
ಅರಿತರವರು ಮೇಲಿದ್ದುದೇನೆಂದು ಏನು ಕೆಳಗಿತ್ತೆಂದು
ಸಮೃದ್ಧ ಸಬಲ ಶಕ್ತಿಯಾಯ್ತು ಪ್ರವೀರ್ಯ
ಕೆಳಗೆ ಬಲವಿತ್ತದರ ಮೇಲಿತ್ತು ಸಂಕಲ್ಪ

ತಾತ್ಪರ್ಯ :

ಕಿರಣಗಳು ಓರೆಯಾಗಿ ವಿಸ್ತರಿಸಿ ಕೆಳಗೆ ಅಥವಾ ಮೇಲಿದ್ದವು (ಯಾರಿಗೂ ತಿಳಿದಿಲ್ಲ); ಸೃಷ್ಟಿಯ ಶಕ್ತಿ, ಜೀವಧಾರಕ ಶಕ್ತಿ ಇತ್ತು.

ವ್ಯಾಖ್ಯಾನ :

ಈ ರಶ್ಮಿಯು ಏಕಪಾತಳಿಯಲ್ಲಿ ವಿಸ್ತರಿಸಿತು.
ತೀರಶ್ಚೀನೋ ವಿತತೋ ರಶ್ಮಿಃ
ಅದರ ಮೇಲ್ಗಡೆಗೆ ಏನೋ ಒಂದು ಇತ್ತು
ಏಷಾಮ್ ಅಧಃ ಸ್ವೀದಾಸೀತ್
ಅದರ ಕೆಳಗಡೆ (ಕೂಡ) ಏನೋ ಒಂದು ಇತ್ತು
ಉದುಪರಿ ಸ್ವೀದಾಸೀತ್
ಬೀಜವು (ರೇತಸ್) ಇತ್ತು, ಸಕಲ ಮಹಿಮೆಯೂ (ಮಹಿಮಾನಃ) ಇತ್ತು
ರೇತೋಧಾ ಆಸನ್ ಮಹಿಮಾನ ಆಸನ್
ಸ್ವಾಂತರ್ಗತ ಶಕ್ತಿಯು (ಸ್ವಧಾ) ಕೆಳಗಡೆ ಇತ್ತು, ಉದ್ದೇಶವು (ಪ್ರಯತಿ) ಮೇಲುಗಡೆ ಇತ್ತು.
ಸ್ವಧಾ ಅವಸ್ತಾತ್ ಪ್ರಯತಿಃ ಪರಸ್ತಾತ್

ಸ್ವಧಾ - ತನ್ನಲ್ಲಿ ಅಂತರ್ಗತವಾದ ಶಕ್ತಿ, ಸ್ವಯಂ ವ್ಯವಸ್ಥಿತಗೊಳ್ಳುವ ಶಕ್ತಿ.
ಸೃಷ್ಟಿಯು ಕೆಳಗಡೆಯಿಂದ ಸ್ವಾಂತರ್ಗತ ಶಕ್ತಿಯಿಂದ ಪ್ರವರ್ತಿತವಾಯಿತು, ಮತ್ತು ಸೃಷ್ಟಿಯ ಉದ್ದೇಶವು (ಪ್ರಯತಿ ) ಮೇಲುಗಡೆ ಇದ್ದು ಪ್ರಜ್ಞೆಯ ಸ್ತರಗಳು ಪ್ರಕಟಗೊಳ್ಳುವಂತೆ ಮತ್ತುಸತ್ಯವು ಎಲ್ಲೆಡೆ ಸ್ಥಿತಗೊಳ್ಳುವಂತೆ ಆಕರ್ಷಿಸುವುದು (ಎಳೆಯುವುದು) ಎಂಬುದನ್ನು ಗಮನಿಸಿ.

ಶ್ಲೋಕ - 6 - ಸಂಸ್ಕೃತದಲ್ಲಿ :

ಕೋ|ಆದ್ಧಾ ವೇದ ಕsಇಹ ಪ್ರವೋಚತ್ಕುತ|ಆಅಜಾತ ಕುತsಇಯಂ ವಿಸೃಷ್ಟಿಃ
ಆರ್ವಾಗ್ದೇವಾ| ಅಸ್ಯ ವಿಸರ್ಜನೇನಾಥಾಕೋ ವೇದಯತ|ಆಅಬಭೂವ
ಕನ್ನಡದಲ್ಲಿ :

ಬಂದುದಿವೆಲ್ಲವೆಲ್ಲಿಂ ಎಂತುಂಟಾಯಿತು ಸೃಷ್ಟಿ
ತಿಳಿದವರಾರದನು ಉಲಿವರಾರು ?
ಸುರರಹರು ಸೃಷ್ಟಿಯಿಂದೀಚಿನವರು
ಯಾರರಿಯುವರು ನಿಜದಿ ಸೃಷ್ಟಿಯುದ್ಭವವ ?

ತಾತ್ಪರ್ಯ :

ಯಾರು ಖಚಿತವಾಗಿ ಇಲ್ಲಿ ತಿಳಿದುಕೊಳ್ಳಬಹುದು? ಯಾರು ಮತ್ತಷ್ಟು ವಿವರಿಸಬಹುದು? ಈ ಸೃಷ್ಟಿ ಎಲ್ಲಿಂದ ಬಂದಿದೆ ? ಮತ್ತು ಈ ಭಾಗದಲ್ಲಿ ಎಲ್ಲಿಗೆ ಮುಂದುವರೆಯುವುದು? ಅದರ ಪ್ರಗತಿಯೊಂದಿಗೆ ದೇವತೆಗಳು ಹುಟ್ಟಿದರು. ಅಲ್ಲಿಂದ ಅವರು ಬಂದರೆಂದು ಯಾರಿಗೆ ಗೊತ್ತಿರುವುದು?
ಸ್ವಾಮಿ ನಿಖಿಲಾದಂದರ ವಿವರಣೆಯಂತೆ - “ಈ ಸೂಕ್ತವುಅದುಎನ್ನುವುದರ ಬದಲಾಗಿಅವನುಎಂದು ಸೂಚಿಸಿದೆ, ಹೀಗಿರುವಾಗ ಸ್ವಾಮಿಗಳು ತಿಳಿಯಪಡಿಸುವುದೇನೆಂದರೆ ಇದುಸಗುಣ ಬ್ರಹ್ಮನೇ ಹೊರತುನಿರ್ಗುಣ ಬ್ರಹ್ಮನಲ್ಲ, ಹಾಗೂ ಸಗುಣ ಬ್ರಹ್ಮನಿಗೆ ಕೆಲವು ಅಂಶಗಳು ಅರಿವಾಗಿರುವುದಿಲ್ಲ ಏಕೆಂದರೆ ಅವನು ನಿರ್ಗುಣ ಬ್ರಹ್ಮನಿಗಿಂತ ಕಡಿಮೆ ಅರಿವುಳ್ಳವನು.

ವ್ಯಾಖ್ಯಾನ :

ಅದನ್ನು ಸರಿಯಾಗಿ ಯಾರು ಬಲ್ಲರು ?
ಕೋ ಅದ್ದಾ ವೇದ
ಯಾರು ಅದನ್ನು ವ್ಯಕ್ತಮಾಡಬಲ್ಲರು ?
ಕ ಇಹ ಪ್ರ ವೋಚತ್
ಅದು ಎಲ್ಲಿಂದ ಉದ್ಭವಿಸಿತು ? (ಆಜಾತಾ) ಎಲ್ಲಿಂದ ಸುರಿಯಲ್ಪಟ್ಟಿತು ? (ವಿಸೃಷ್ಟಿಃ)
ಕುತ ಆಜಾತ ಕುತ ಇಯಂ ವಿಸೃಷ್ಟಿಃ
ಅದರ ವರ್ಷಣದಿಂದಲೇ ದೇವತೆಗಳು ಹೊರಬಂದರು (ವಿಸರ್ಜನ).
ಅರ್ವಾಗ್ದೇವಾ ಅಸ್ಯ ವಿಸರ್ಜನೇನೋ ಅಥಾ
ಎಲ್ಲಿಂದ ಅದು ಅಸ್ತಿತ್ವದಲ್ಲಿ ಬಂದಿತು (ಆಬಭೂವ)? ಯಾರು ಬಲ್ಲರು?
ಕೋ ವೇದ ಯತ ಆಬಭೂವ
ಯಾರುಎಂಬ (ಪ್ರಶ್ನಾರ್ಥಕ ಸರ್ವನಾಮ)ದಿಂದ ಈ ವಾಕ್ಯಗಳು ಪ್ರಾರಂಭಗೊಂಡ ಕಾರಣಕ್ಕೆ, ಅನೇಕರು ಈ ಮಂತ್ರ ಹಾಗೂ ಕೊನೆಯ ಮಂತ್ರಗಳನ್ನು ಸಂದೇಹ ಸೂಚಕವೆಂಬಂತೆ ವ್ಯಾಖ್ಯಾನಿಸಿದ್ದಾರೆ. ಆನಂದಕುಮಾರ ಸ್ವಾಮಿಗಳು ಸೂಚಿಸಿರುವಂತೆ, ಈ ಪ್ರಶ್ನೆಗಳು ಅದ್ಭುತವನ್ನು (ಆಶ್ಚರ್ಯವನ್ನು) ವ್ಯಕ್ತಪಡಿಸುತ್ತದೆ. ಈ ಸೃಷ್ಟಿಯು ಎಷ್ಟು ಆಶ್ಚರ್ಯಕರವೆಂದರೆ, ಇದು ಘಟಿಸುವಂತೆ ಮಾಡಿದ ಆಏಕ” (ಪರಮತತ್ತ್ವ)ವನ್ನು ಕುರಿತು ಕಲ್ಪಿಸಲೂ ಆಗದು.

ಶ್ಲೋಕ - 7 - ಸಂಸ್ಕೃತದಲ್ಲಿ
ಇಯಂ ವಿಸೃಷ್ಟಿರ್ಯತ| ಆಅಬಭೂವ ಯದಿ ವಾ ದಧೇ ಯದಿ ವಾ ನ ಯೋ
ಆಸ್ಯಾಧ್ಯಕ್ಷಃ ಪರಮೇ ವ್ಯೋಮಂತ್ಸೋ
ಆಂಗ ವೇದ ಯದಿ ವಾ ನ ವೇದ
ಕನ್ನಡದಲ್ಲಿ :
ವಿಚಿತ್ರ ಸೃಷ್ಟಿಯಿದರ ಉಗಮವೆಲ್ಲಿಂದ
ಅದನಾತ ಕಲ್ಪಿಸಿದನೋ ಇಲ್ಲವೊ
ಅತ್ಯುನ್ನತ ನೆಲೆಯಿಂದ ಸರ್ವೇಕ್ಷಿಸುವ
ಅವನೆ ಅರಿತಿದ್ದಾನು ಅಥವಾ ಬಹುಶಃ ಅವನೂ ಅರಿತಿಲ್ಲ

ತಾತ್ಪರ್ಯ :
ಎಲ್ಲಿಂದ ಸೃಷ್ಟಿಯು ಉಂಟಾಯಿತು? ಅವನೇ ಸೃಷ್ಟಿಸಿದನೇ ಅಥವಾ ಇಲ್ಲವೇ?
ಅತ್ಯುನ್ನತ ನೆಲೆಯಿಂದ ವೀಕ್ಷಿಸುವ ಅವನೆ, ಖಂಡಿತವಾಗಿ ಅವನೇ ಅಥವಾ ಬಹುಷಃ ಅವನಿಗೂ ಅರಿವಿಲ್ಲದಿರಬಹುದು.

ವ್ಯಾಖ್ಯಾನ :
ಈ ಮಂತ್ರವು ವೇದಕಾಲದ ನಂತರವೇ ಋಗ್ವೇದದಲ್ಲಿ ಸೇರಿಸಿರಬಹುದೆಂಬ ಅನಿಸಿಕೆಯು ಅನೇಕ ವ್ಯಾಖ್ಯಾನಕಾರರದ್ದಾಗಿದೆ. ಈ ಮಂತ್ರದಲ್ಲಿ ವಿವರಿಸಿರುವ ಆಲೋಚನೆಗಳು ವೇದಕಾಲದ ನಂತರದ ಭಾರತೀಯ ಶಾಸ್ತ್ರ ದರ್ಶನದ್ದಾಗಿರಬಹುದು. ಇದು ಸಾಂಖ್ಯ ಚಿಂತನೆಗಳಲ್ಲಿ ವಿವಾದವನ್ನು ಸೃಷ್ಟಿಸುವ ಸಲುವಾಗಿರಬಹುದೇ ?
ಈ ಮಂತ್ರವು ಪೂರ್ವ ಕಾಲದ ಸಂಶಯ - ಪ್ರಕೃತಿಯ ವಿಚಾರ ಮತ್ತು ಅಜ್ಞೇಯತಾವಾದಿ ಸಿದ್ಧಾಂತವನ್ನು ಪ್ರತಿಪಾದಿಸುತ್ತದೆಂದು ಹಲವರ ಅಭಿಪ್ರಾಯ.
ಈ ವಿಸೃಷ್ಟಿಯು ಎಲ್ಲಿಂದ (ಯಾವುದರಿಂದ) ಆಯಿತು (ಆಬಭೂವ)?
(“ಇಯಂ ವಿಸೃಷ್ಟಿರ್ಯತ ಆಬಭೂವ”)
ಅಥವಾ, ಅದನ್ನು ಯಾವನಾದರೂ ವಿಧಿಸಿದ್ದನೋ ಅಥವಾ ಇಲ್ಲವೋ ?
(“ಯದಿ ವಾ ದಧೇ ಯದಿ ವಾ ನ”)
ಅದರ ಅಧ್ಯಕ್ಷನು (ಮೇಲಿನಿಂದ ನೋಡುವವನು) ಸರ್ವೋನ್ನತ ಪರಮ ವ್ಯೋಮದಲ್ಲಿ ಇರುವವನು
(“ಯೋ ಅಸ್ಯಾಧ್ಯಕ್ಷಃ ಪರಮೇ ವ್ಯೋಮನ್”)
ಅದನ್ನು ನಿಜಕ್ಕೂ ಬಲ್ಲ, ಅಥವಾ, ಅವನೂ (ಪೂರ್ವಭಾವಿಯಾಗಿ) ಅರಿತಿರಲಿಕ್ಕಿಲ್ಲ.
3 ಮತ್ತು 4 ನೇ ಪಂಕ್ತಿಗಳು ತುಂಬ ಕುತೂಹಲಕಾರಿ. ಭಾರತಶಾಸ್ತ್ರವೇತ್ತರು ಸಾಮಾನ್ಯವಾಗಿ ಮಾಡುವ ಅನುವಾದ, “ಅವನು ನಿಜಕ್ಕೂ ಬಲ್ಲ ಅಥವಾ ಅವನಿಗೆ ಗೊತ್ತಿಲ್ಲಎಂದು. ಸೃಷ್ಟಿಕರ್ತನಿಗೂ ಎಲ್ಲವೂ ತಿಳಿದಿಲ್ಲ ಎಂದು (ಹೇಳುವುದರಲ್ಲಿ ) ಅವರು ಸಂತುಷ್ಟರು. ಇದಕ್ಕೆ ಏಕೈಕ ಅಪವಾದ ಆನಂದಕುಮಾರಸ್ವಾಮಿಯವರು. ಅವರುಅವನು ಬಲ್ಲ, ಮತ್ತು ಅವನು ಅರಿತಿಲ್ಲಎಂದು ಅನುವಾದ ಮಾಡಿದ್ದಾರೆ. ಇದರ ಹಿಂದಿನ ಕಲ್ಪನೆಯೆಂದರೆ, ಯಾವುದೇ ಪರಿಣಾಮವು (ಘಟನೆಯು) ಕೊನೆಯ ಕ್ಷಣದವರೆಗೂ ಸ್ಥಿರಗೊಂಡಿರುವುದಿಲ್ಲ ಎಂಬುದೇ ಆಗಿದೆ. ಅನುಗ್ರಹವು ಕಟ್ಟಕಡೆಯ ಕ್ಷಣದಲ್ಲಿ ಕಾರ್ಯವೆಸಗಬಲ್ಲದು.
ಅವನ ಒಪ್ಪಿಗೆಯಿಲ್ಲದೆ (ಆಜ್ಞೆಯಿಲ್ಲದೆ) ಒಂದು ಹುಲ್ಲು ಗರಿಕೆಯೂ ಚಲಿಸದುಎಂಬ ಲೋಕೋಕ್ತಿಯನ್ನು ನಾವು ಕೇಳಿದ್ದೇವೆ. ಅದು ನಿಜ. ಆದರೆ ಈ ಮಾತು, “ಎಲ್ಲವೂ ಪೂರ್ವಭಾವಿಯಾಗಿ ಯೋಜಿತವಾಗಿರುತ್ತದೆಎಂದು ಹೇಳುವುದಿಲ್ಲ. ಪ್ರತಿಯೊಂದು ಕ್ರಿಯೆಯ ಮುಕ್ತಾಯಕ್ಕೂ ಅನೇಕ ಸಾಧ್ಯತೆಗಳಿರುತ್ತದೆ. ಯಾವ ಸಾಧ್ಯತೆಯು ಸಫಲವಾಗಬೇಕೆಂಬುದನ್ನು ಸೃಷ್ಟಿಕರ್ತ ಮಾತ್ರ ನಿರ್ಧರಿಸಬಲ್ಲ. ಅವನು ಅದನ್ನು ಪೂರ್ವಯೋಜಿತನಾಗಿ ಮಾಡಿಡಬೇಕಿಲ್ಲ. ಹಾಗಿರುವುದರಿಂದ, “ಅವನು ಬಲ್ಲ, ಮತ್ತು ಅವನು ಪೂರ್ವಭಾವಿಯಾಗಿ ತಿಳಿದಿಲ್ಲಎಂಬ ಎರಡೂ ಹೇಳಿಕೆಗಳೂ ನಿಜವೇ. ಯಾವುದೊಂದು ಕ್ರಿಯೆಯ ಮುಕ್ತಾಯವನ್ನು ಮೊದಲೇ ಅವನು ನಿಗದಿತಗೊಳಿಸಿರುವುದಿಲ್ಲ, ಯಾಕೆಂದರೆ, ಹಾಗೆ ಮಾಡುವುದೆಂದರೆ ತನ್ನದೇ ಶಕ್ತಿಗೆ (ಸಾಮರ್ಥ್ಯಕ್ಕೆ) ಅವನುಮಿತಿಯನ್ನು ಹಾಕಿಕೊಂಡಂತಾಗುವುದು. ಪರಮ ಪುರುಷನು ಯಾವುದೇ ಮಿತಿಗೂ ಅತೀತನೆಂಬುದು ಗ್ರಹೀತ ವ್ಯಾಖ್ಯೆ.

ಮೂಲಗಳು :
ಸಂಸ್ಕೃತ ಹಾಗೂ ಕನ್ನಡದಲ್ಲಿನ ಮಂತ್ರಗಳು - ಶ್ರೀ.ಬಿ.ಎಸ್.ಚಂದ್ರಶೇಖರ ಅವರಸವಿಗನ್ನಡ ಸ್ತೋತ್ರಚಂದ್ರಿಕೆ
ತಾತ್ಪರ್ಯ / ವ್ಯಾಖ್ಯಾನ : ಋಗ್ವೇದ ಸಂಹಿತೆ - ಹತ್ತನೇ ಮಂಡಲ, ಭಾಗ - 2.

















Comments

Popular posts from this blog

ಶಿವ ಸಂಕಲ್ಪ ಸೂಕ್ತ ( ಶುಕ್ಲಯಜುರ್ವೇದ, ವಾಜಸನೇಯ ಸಂಹಿತಾ)

ಮಂತ್ರಪುಷ್ಪ (ತೈತ್ತರೀಯ ಆರಣ್ಯಕ)

ಪುರುಷ ಸೂಕ್ತ