Posts

Showing posts from June, 2018

ರುದ್ರಾಭಿಷೇಕದ ಆರಂಭ

Image
ರುದ್ರಾಭಿಷೇಕದ ಆರಂಭ ಸಂಸ್ಕೃತದಲ್ಲಿ : ಓಂ ಅಸ್ಯ ಶ್ರೀರುದ್ರಪ್ರಶ್ನಮಹಾಮಂತ್ರಸ್ಯ | ಅಘೋರ ಋಷಿಃ | ಅನುಷ್ಟುಪ್ ಛಂದಃ | ಸಂಕರ್ಷಣಮೂರ್ತಿ ಸ್ವರೂಪೋ ಯೋಸಾವಾದಿತ್ಯಃ ಪರಮಪುರುಷಃ ಸ ಏಷ ರುದ್ರೋ ದೇವತಾ |  ನಮಶ್ಶಿವಾಯೇತಿ ಬೀಜಮ್ | ಶಿವತರಾಯೇತಿ ಶಕ್ತಿಃ ಮಹಾದೇವಾಯೇತಿ ಕೀಲಕಮ್ | ಸಾಂಬಪರಮೇಶ್ವರ ಪ್ರಸಾದಸಿದ್ಧ್ಯರ್ಥೇ ಏಕವಾರಂ ವಾ ಏಕಾದಶವಾರಂ ವಾ ಶತವಾರಂ ರುದ್ರಜಪಾಭಿಷೇಕೇ ವಿನಿಯೋಗಃ || ಕನ್ನಡದಲ್ಲಿ : ಓಂ ರುದ್ರಪ್ರಶ್ನೆಯರೂಪದೀ ಮಹಾಮಂತ್ರಕೆ ಅಘೋರನೇ ಋಷಿಯು | ಅನುಷ್ಟುಪ್ ಛಂದಸ್ಸು | ಸಂಕರ್ಷಣಸ್ವರೂಪದಾದಿತ್ಯರೂಪದ ಪರಮಪುರುಷನೆ ಈ ರುದ್ರದೇವತೆಯು | ನಮಶ್ಶಿವಾಯವೆಂಬುದೆ ಬೀಜ | ಶಿವತರವೆನುವುದು ಶಕ್ತಿ | ಮಹಾದೇವ ಎಂಬುದು ಕೀಲಕವು | ಸಾಂಬ ಪರಮೇಶ್ವರನ ಪ್ರಸಾದ ಸಿದ್ಧಿಸಲು ಒಮ್ಮೆ ಯಾ ಹನ್ನೊಂದು ಸಲ ಯಾ ನೂರು ಸಲ ರುದ್ರಾಭಿಷೇಕ ವಿನಿಯೋಗ ವಿವರಣೆ : ಓಂ ಈ ರುದ್ರಪ್ರಶ್ನಕರೂಪವಾದ ಮಹಾಮಂತ್ರಕ್ಕೆ - ಋಷಿ - ಅಘೋರ ; ಛಂದಸ್ಸು - ಅನುಷ್ಟುಪ್ ; ದೇವತೆ - ಸಂಕರ್ಷಣಮೂರ್ತಿ ಸ್ವರೂಪನಾದ ಯಾವ ಆ ಆದಿತ್ಯರೂಪನಾದ ಪರಮ ಪುರುಷನುಂಟೋ ಅವನೇ ಈ ರುದ್ರದೇವತೆಯಾಗಿದ್ದಾನೆ. (ಒಂದು ಗಾಯತ್ರೀ ಛಂದಸ್ಸು ಮುಉರು ಅನುಷ್ಟುಪ್ ಛಂದಸ್ಸುಗಳು ಮೂರು ಪಂಕ್ತಿ ಛಂದಸ್ಸುಗಳು ಏಳು ಅನುಷ್ಟುಪ್ ಛಂದಸ್ಸುಗಳು ಎರಡು ಜಗತೀ ಛಂದಸ್ಸುಗಳು).  ಬಿಜ - ನಮಃ ಶ

ಪಂಚಮುಖನ್ಯಾಸ

Image
ಪಂಚಮುಖನ್ಯಾಸ ಪ್ರಸ್ತಾವನೆ : ಸಾಮಾನ್ಯವಾಗಿ ಶಿವನನ್ನು ಲಿಂಗರೂಪದಲ್ಲಿ ಪೂಜಿಸುವುದು ವಾಡಿಕೆ. ಕೆಲವು ಪ್ರದೇಶದಲ್ಲಿ ಐದು ಮುಖದ ಶಿವಲಿಂಗವನ್ನು ಪೂಜಿಸುವುದನ್ನುಕಾಣಬಹುದು. ಈ ಐದು ಮುಖಗಳೆಂದರೆ : ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ ಮತ್ತು ಈಶಾನ. ಶಿವನ ನಾಲಕ್ಕು ಮುಖಗಳು ನಾಲಕ್ಕುದಿಕ್ಕುಗಳನ್ನು ಪ್ರತಿನಿಧಿಸಿದರೆ, ಐದನೇ ಮುಖವು ಆಕಾಶದೆಡೆಗೆ ಮುಖ ಮಾಡಿರುವುದು ಹಾಗೂ ಇದು ವಿಶ್ವದ ಮುಖ ಮತ್ತು ಶುದ್ಧತೆ ಹಾಗೂ ಆಧ್ಯಾತ್ಮಿಕ ಉನ್ನತಿಯನ್ನು ಪ್ರತಿನಿಧಿಸುತ್ತದೆ. ಪಂಚಮುಖಾನ್ಯಾಸದಲ್ಲಿನ ಐದು ಶ್ಲೋಕಗಳು ಶಿವನ ಐದು ಮುಖಗಳು, ನಾಲಕ್ಕು ವೇದಗಳು ಹಾಗೂ ಓಂ ಕಾರವನ್ನು ಪ್ರತಿನಿಧಿಸುತ್ತವೆ. ಶ್ಲೋಕ - 1 - ಸಂಸ್ಕೃತದಲ್ಲಿ : ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರಃ ಪ್ರಚೋದಯಾತ್ || ಸಂವರ್ತಾಗ್ನಿತಟಿತ್ಪ್ರದೀಪ್ತಕನಕಪ್ರಸ್ಪರ್ಧಿ ತೇಜೋಮಯಂ ಗಂಭೀರಧ್ವನಿಮಿಶ್ರಿತೋಗ್ರದಹನತ್ಪ್ರೋದ್ಭಾಸಿ ತಾಮ್ರಧರಮ್ || ಅರ್ಧೇಂದುದ್ಯುತಿಲೋಲಪಿಂಗಳಜಟಾಭಾರಪ್ರಬದ್ಧೋರಗಂ ವಂದೇ ಸಿದ್ಧಸುರಾಸುರೇಂದ್ರನಮಿತಂ ಪೂರ್ವಂ ಮುಖಂ ಶೂಲಿನಃ || ಓಂ ಅಂ ಕಂ ಖಂ ಗಂ ಘಂ ಙಂ ಆಂ ಓಂ ಓಂ ನಮೋ ಭಗವತೇ ರುದ್ರಾಯ | ಓಂ ನಂ ಪೂರ್ವಮುಖಾಯ ನಮಃ ಕನ್ನಡದಲ್ಲಿ : ಆ ಪುರುಷನನ್ನರಿತಿಹೆವು ಮಹಾದೇವನಂ ಧ್ಯಾನಿಪೆವು ರುದ್ರದೇವಂ ಪ್ರಚೋದ