ರುದ್ರಾಭಿಷೇಕದ ಆರಂಭ



ರುದ್ರಾಭಿಷೇಕದ ಆರಂಭ


ಸಂಸ್ಕೃತದಲ್ಲಿ :
ಓಂ ಅಸ್ಯ ಶ್ರೀರುದ್ರಪ್ರಶ್ನಮಹಾಮಂತ್ರಸ್ಯ | ಅಘೋರ ಋಷಿಃ | ಅನುಷ್ಟುಪ್ ಛಂದಃ | ಸಂಕರ್ಷಣಮೂರ್ತಿ ಸ್ವರೂಪೋ ಯೋಸಾವಾದಿತ್ಯಃ ಪರಮಪುರುಷಃ ಸ ಏಷ ರುದ್ರೋ ದೇವತಾನಮಶ್ಶಿವಾಯೇತಿ ಬೀಜಮ್ | ಶಿವತರಾಯೇತಿ ಶಕ್ತಿಃ ಮಹಾದೇವಾಯೇತಿ ಕೀಲಕಮ್| ಸಾಂಬಪರಮೇಶ್ವರ ಪ್ರಸಾದಸಿದ್ಧ್ಯರ್ಥೇ ಏಕವಾರಂ ವಾ ಏಕಾದಶವಾರಂ ವಾ ಶತವಾರಂ ರುದ್ರಜಪಾಭಿಷೇಕೇ ವಿನಿಯೋಗಃ ||
ಕನ್ನಡದಲ್ಲಿ :
ಓಂ ರುದ್ರಪ್ರಶ್ನೆಯರೂಪದೀ ಮಹಾಮಂತ್ರಕೆ ಅಘೋರನೇ ಋಷಿಯು | ಅನುಷ್ಟುಪ್ ಛಂದಸ್ಸು | ಸಂಕರ್ಷಣಸ್ವರೂಪದಾದಿತ್ಯರೂಪದ ಪರಮಪುರುಷನೆ ಈ ರುದ್ರದೇವತೆಯು | ನಮಶ್ಶಿವಾಯವೆಂಬುದೆ ಬೀಜ| ಶಿವತರವೆನುವುದು ಶಕ್ತಿ | ಮಹಾದೇವ ಎಂಬುದು ಕೀಲಕವು | ಸಾಂಬ ಪರಮೇಶ್ವರನ ಪ್ರಸಾದ ಸಿದ್ಧಿಸಲು ಒಮ್ಮೆ ಯಾ ಹನ್ನೊಂದು ಸಲ ಯಾ ನೂರು ಸಲ ರುದ್ರಾಭಿಷೇಕ ವಿನಿಯೋಗ

ವಿವರಣೆ :
ಓಂ ಈ ರುದ್ರಪ್ರಶ್ನಕರೂಪವಾದ ಮಹಾಮಂತ್ರಕ್ಕೆ -
ಋಷಿ - ಅಘೋರ; ಛಂದಸ್ಸು - ಅನುಷ್ಟುಪ್; ದೇವತೆ - ಸಂಕರ್ಷಣಮೂರ್ತಿ ಸ್ವರೂಪನಾದ ಯಾವ ಆ ಆದಿತ್ಯರೂಪನಾದ ಪರಮ ಪುರುಷನುಂಟೋ ಅವನೇ ಈ ರುದ್ರದೇವತೆಯಾಗಿದ್ದಾನೆ. (ಒಂದು ಗಾಯತ್ರೀ ಛಂದಸ್ಸು ಮುಉರು ಅನುಷ್ಟುಪ್ ಛಂದಸ್ಸುಗಳು ಮೂರು ಪಂಕ್ತಿ ಛಂದಸ್ಸುಗಳು ಏಳು ಅನುಷ್ಟುಪ್ ಛಂದಸ್ಸುಗಳು ಎರಡು ಜಗತೀ ಛಂದಸ್ಸುಗಳು). 
ಬಿಜ - ನಮಃ ಶಿವಾಯ; ಶಕ್ತಿ - ಶಿವತರಾಯ;
ಕೀಲಕ - ಮಹಾದೇವಾಯ.
ಸಾಂಬಪರಮೇಶ್ವರನ ಅನುಗ್ರಹಕ್ಕಾಗಿ ಒಂದು ವಾರವಾಗಲಿ ಅಥವಾ ಹನ್ನೊಂದು ಬಾರಿಯಾಗಲಿ ಅಥವಾ ನೂರು ಬಾರಿಯಾಗಲಿ ರುದ್ರಜಪ ಪೂರ್ವಕವಾದ ಅಭಿಷೇಕ ಕಾರ್ಯದಲ್ಲಿ ಈ ಮಂತ್ರವು ವಿನಿಯೋಗವಾಗುತ್ತದೆ.

ಕರನ್ಯಾಸಃ - ಸಂಸ್ಕೃತದಲ್ಲಿ :
ಅಗ್ನಿಹೋತ್ರಾತ್ಮನೇ ಅಂಗುಷ್ಟಾಭ್ಯಾಂ ನಮಃ | ದರ್ಶಪೂರ್ಣಮಾಸಾತ್ಮನೇ ತರ್ಜನೀಭ್ಯಾಂ ನಮಃ ಚಾತುರ್ಮಾಸ್ಯಾತ್ಮನೇ ಮಧ್ಯಮಾಭ್ಯಾಂ ನಮಃ | ನಿರೂಢಪಶುಬಂಧಾತ್ಮನೇ ಅನಾಮಿಕಾಭ್ಯಾಂ ನಮಃ | ಜ್ಯೋತಿಷ್ಟೋಮಾತ್ಮನೇ ಕನಿಷ್ಠಿಕಾಭ್ಯಾಂ ನಮಃ | ಸರ್ವಕ್ರತ್ವಾತ್ಮನೇ ಕರತಲಕರಪೃಷ್ಠಾಭ್ಯಾಂ ನಮಃ ||
ಕರನ್ಯಾಸ - ಕನ್ನಡದಲ್ಲಿ :
ಅಗ್ನಿಹೋತ್ರಯಾಗ ರೂಪಂಗೆ ಹೆಬ್ಬೆರಳುಗಳಲಿ ನಮನ | ದರ್ಶಪೂರ್ಣಮಾಸಯಾಗ ರೂಪಂಗೆ ತೋರುಬೆರಳುಗಳಲಿ ನಮನ | ನಾಲ್ಕುಮಾಸದ ಯಾಗ ರೂಪಂಗೆ ಮಧ್ಯದ ಬೆರಳುಗಳಿಂದ ನಮನ ರೂಢಿಯ ಪಶುಬಂಧಯಾಗ ರೂಪಂಗೆ ಉಂಗುರದ ಬೆರಳುಗಳಿಂದ ನಮನಜ್ಯೋತಿಷ್ಟೋಮಯಾಗ ರೂಪಂಗೆ ಕಿರುಬೆರಳುಗಳಿಂದ ನಮನ | ಎಲ್ಲ ಯಾಗಗಳ ರೂಪಂಗೆ ಕರತಲಗಳಿಂದ ಕರದ ಹಿಂಬದಿಗಳಿಂದ ನಮನ ||

ಅಂಗನ್ಯಾಸಃ - ಸಂಸ್ಕೃತದಲ್ಲಿ :
ಅಗ್ನಿಹೋತ್ರಾತ್ಮನೇ ಹೃದಯಾಯ ನಮಃ | ದರ್ಶಪೂರ್ಣಮಾಸಾತ್ಮನೇ ಶಿರಸೇ ಸ್ವಾಹಾ | ಚಾತುರ್ಮಾಸ್ಯಾತ್ಮನೇ ಶಿಖಾಯೈ ವಷಟ್ | ನಿರೂಢಪಶುಬಂಧಾತ್ಮನೇ ಕವಚಾಯ ಹುಮ್ | ಜ್ಯೋತಿಷ್ಟೋಮಾತ್ಮನೇ ನೇತ್ರತ್ರಯಾಯ ವೌಷಟ್ | ಸರ್ವಕ್ರತ್ವಾತ್ಮನೇ ಅಸ್ತ್ರಾಯ ಫಟ್ |
ಭೂರ್ಭುವಸ್ಸುವರೋಮಿತಿ ದಿಗ್ಬಂಧಃ ||
ಅಂಗನ್ಯಾಸ - ಕನ್ನಡದಲ್ಲಿ :
ಅಗ್ನಿಹೋತ್ರಯಾಗ ರೂಪಂಗೆ ಹೃದಯಕ್ಕೆ ನಮನ | ದರ್ಶಪೂರ್ಣಮಾಸಯಾಗ ರೂಪಂಗೆ ಶಿರಕೆ ಹವಿಯಿತ್ತು ನಮನ | ನಾಲ್ಕುಮಾಸದ ಯಾಗ ರೂಪಂಗೆ ಶಿಖೆಗೆ ಹವಿಯಿತ್ತು ನಮನ | ರೂಢಿಯ ಪಶುಬಂಧಯಾಗ ರೂಪಂಗೆ ಕವಚಕಾಹುತಿಯಿತ್ತು ನಮನ | ಜ್ಯೋತಿಷ್ಟೋಮಯಾಗ ರೂಪಂಗೆ ಮೂರುಕಂಗಳಿಗೆ ಹವಿಯರ್ಪಿಸುತ ನಮನ | ಎಲ್ಲ ಯಾಗಗಳ ರೂಪಂಗೆ ಆಯುಧಕೆ ಮಣಿದು ನಮನ | ಓಂ ಬೂರ್ಭುವಸ್ಸುವಃ ಓಮೆಂದು ದಿಗ್ಭಂಧವು ||

ಧ್ಯಾನಮ್ - ಸಂಸ್ಕೃತದಲ್ಲಿ - ಶ್ಲೋಕ - 1 :
ಅಪಾತಲ -ನಭಸ್ಸ್ಥಲಾಂತ-ಭುವನ-ಬ್ರಹ್ಮಾಂಡಮಾವಿಸ್ಫುರ-
ಜ್ಯೋತಿಃ  ಸ್ಫಾಟಿಕ ಲಿಂಗಮೌಲಿ ವಿಲಸತ್ಪೂರ್ಣೇಂದುವಾಂತಾಮೃತೈಃ
ಅಸ್ತೋಕಾಪ್ಲುತಮೇಕಮೀಶಮನಿಶಂ ರುದ್ರಾನುವಾಕಾನ್ ಜಪನ್
ಧ್ಯಾಯೇದೀಪ್ಸಿತ ಸಿದ್ಧಯೇ ಧ್ರುವಪದಂ ವಿಪ್ರೋಭಿಷಿಂಚೇಚ್ಛಿವಮ್ ||
ಕನ್ನಡದಲ್ಲಿ - ಧ್ಯಾನ - ಶ್ಲೋಕ - 1 :
ಪಾತಾಳದಿಂದಾಗಸದತ್ತ ಭುವನ ಬ್ರಹ್ಮಾಂಡವಾವರಿಸಿದ ಜ್ಯೋತಿ-
ಸ್ಫಟಿಕಲಿಂಗದಶಿರದ ಪೂರ್ಣೇಂದು ಸುರಿಸುವ ಸುಧೆಯ ಧಾರೆಯಲಿ-
ನೆರೆ ಮೀಯುವೋರ್ವನೆ ಈಶನಂ ರುದ್ರಾನುವಾಕದಿ ಸತತ ಧ್ಯಾನಿಸುತ
ಇಷ್ಟಾರ್ಥಸಿದ್ಧಿಗೆ ವಿಪ್ರನು ಧ್ರುವಪದವನೀವ ಶಿವನಭಿಷೇಕ ಗೈಯುವುದು ||

ವಿವರಣೆ :
ಪಾತಾಲ ಮೊದಲುಗೊಂಡು ಗಗನತಲಾಂತವಾದ ಭುವನಗಳು ಹಾಗೂ ಬ್ರಹ್ಮಾಂಡ ಪೂರ್ತಿಯಾಗಿ ಆವಿರ್ಭವಿಸಿ ಪ್ರಕಾಶಿಸುತ್ತಿರುವ ಜ್ಯೋತಿರ್ಮಯವಾದ ಸ್ಫಟಿಕ ವರ್ಣದ ಲಿಂಗದ ತುದಿಯಲ್ಲಿ ಬೆಳಗುತ್ತಿರುವ ಪೂರ್ಣಚಂದ್ರನಿಂದ ಸುರಿಸಲ್ಪಟ್ಟ ಅಮೃತ ಜಲಗಳಿಂದ ಸಂಪೂರ್ಣವಾಗಿ ಅಭಿಷಿಕ್ತನಾಗಿರುವ ಏಕೈಕನಾದ ಈಶನನ್ನು ಸದಾ ರುದ್ರಾನುವಾಕಗಳನ್ನು ಜಪಿಸುತ್ತಾ ಧ್ಯಾನಮಾಡತಕ್ಕದ್ದು. ಇಷ್ಟಾರ್ಥದ ಸಿದ್ಧಿಗಾಗಿ ವಿಪ್ರನಾದವನು ಶಾಶ್ವತಧಾಮನಾದ ಶಿವನನ್ನು ಅಭಿಷೇಕ ಮಾಡಬೇಕು.

ಧ್ಯಾನಮ್ - ಸಂಸ್ಕೃತದಲ್ಲಿ - ಶ್ಲೋಕ - 2 :
ಬ್ರಹ್ಮಾಂಡವ್ಯಾಪ್ತದೇಹಾ-ಭಸಿತ-ಹಿಮರುಚೋ ಭಾಸಮಾನಾ
ಭುಜಂಗೈಃ ಕಂಠೇ ಕಾಲಾಃ ಕಪರ್ದಾಕಲಿತ ಶಶಿಕಲಾಶ್ಚಂಡಕೋದಂಡಹಸ್ತಾಃ
ತ್ರ್ಯಕ್ಷಾ ರುದ್ರಾಕ್ಷಭೂಷಾಃ ಪ್ರಣತಭಯಹರಾಶ್ಯಾಮ್ಭವಾ ಮೂರ್ತಿಭೇದಾಃ
ರುದ್ರಾಶ್ಶ್ರೀಃ ರುದ್ರಸೂಕ್ತ-ಪ್ರಕಟಿತವಿಭವಾನಃ ಪ್ರಯಚ್ಛನ್ತು ಸೌಖ್ಯಮ್ ||
ಕನ್ನಡದಲ್ಲಿ - ಧ್ಯಾನ - ಶ್ಲೋಕ - 2 :
ಬ್ರಹ್ಮಾಂಡ ವ್ಯಾಪಿಸಿದ ದೇಹ ಹಿಮಕಾಂತಿಯೊಲು ಬೆಳಗುವ ಭಸ್ಮಲೇಪ
ಸರ್ಪಗಳಿಂದಶೋಭಿಪ ನೀಲಿಗೊರಳು ಜಟೆಯ ಚಂದ್ರ ಕರದ ಕೋದಂಡ
ಮುಕ್ಕಣ್ಣ ರುದ್ರಾಕ್ಷಹಾರಧರ ಶರಣಭಯಹರವೀ ಶಂಭುಮೂರ್ತಿ
ರುದ್ರಸೂಕ್ತ ತೋರುವ ವೈಭವದ ರುದ್ರರೆಮಗೆ ಸೌಖ್ಯವನು ನೀಡಲಿ.||

ವಿವರಣೆ :
ಶ್ರೀ ರುದ್ರಸೂಕ್ತದಿಂದ ಪ್ರಕಟಿತವಾದ ವೈಭವವುಳ್ಳ ರುದ್ರರು ನಮಗೆ ಸೌಖ್ಯವನ್ನು ನೀಡಲಿ. ಶಂಭುವಿನ ಮೂರ್ತಿಭೇದಗಳು ಪ್ರಣಾಮ ಮಾಡಿದವರ ಭಯವನ್ನು ಅಪಹರಿಸುತ್ತವೆ. ಶಂಭುವಿನ ಮೂರ್ತಿಭೇದಗಳು ಬ್ರಹ್ಮಾಂಡವನ್ನು ವ್ಯಾಪಿಸಿರುವ ಸ್ವರೂಪವುಳ್ಳದ್ದಾಗಿವೆ; ಭಸ್ಮಲೇಪನದಿಂದ ಹಿಮದಕಾಂತಿಯಂತೆ ಕಾಂತಿಯನ್ನು ಹೊಂದಿವೆ; ಸರ್ಪಗಳಿಂದ ಪ್ರಕಾಶಿಸುತ್ತಿವೆ; ಕಂಠದಲ್ಲಿ ಕಪ್ಪು ಬಣ್ಣವಿದೆ; ಜಟಾಜೂಟದಲ್ಲಿ ಸೇರಿರುವ ಚಂದ್ರಕಲೆಯನ್ನು ಹೊಂದಿವೆ; ಮೂರು ಕಣ್ಣುಗಳನ್ನು ಹೊಂದಿವೆ; ರುದ್ರಾಕ್ಷಗಳನ್ನು ಅಲಂಕಾರವಾಗಿ ಹೊಂದಿವೆ; ಇಂಥಹ ಶಂಭುವಿನ ಮೂರ್ತಿಭೇದಗಳು ನಮಗೆ ಸೌಖ್ಯವನ್ನು ನೀಡಲಿ.

ಧ್ಯಾನಮ್ - ಸಂಸ್ಕೃತದಲ್ಲಿ - ಶ್ಲೋಕ - 3 :
ಶುದ್ಧಸ್ಫಟಿಕ ಸಂಕಾಶಂ ಶುದ್ಧವಿದ್ಯಾ ಪ್ರದಾಯಕಮ್ |
ಶುದ್ಧಂ ಪೂರ್ಣಂ ಚಿದಾನಂದಂ ಸದಾಶಿವಮಹಂ ಭಜೇ||
ಕನ್ನಡದಲ್ಲಿ - ಧ್ಯಾನ - ಶ್ಲೋಕ - 3 :
ಶುದ್ಧ ಪಟಿಕ ಪ್ರಭೆಯವನ ಶುದ್ಧವಿದ್ಯೆಯನೀವನ
ಶುದ್ಧ ಸಂಪೂರ್ಣ ಚಿದಾನಂದನ ಸದಾಶಿವನ ಭಜಿಸುವೆ ನಾ

ವಿವರಣೆ :
ಶುದ್ಧವಾದ ಸ್ಫಟಿಕದಂತೆ ಪ್ರಕಾಶಿಸುತ್ತಿರುವವನೂ ಶುದ್ಧವಿದ್ಯೆಯನ್ನು ದಯಪಾಲಿಸುವವನೂ ಪರಿಶುದ್ಧನೂ ಪರಿಪೂರ್ಣನೂ ಚಿದಾನಂದರೂಪನೂ ಆದ ಸದಾಶಿವನನ್ನು ನಾನು ಭಕ್ತಿಯಿಂದ ಸೇವಿಸುತ್ತೇನೆ.

ಮೂಲಗಳು : ಸಂಸ್ಕೃತ ಮಂತ್ರಗಳು ಹಾಗೂ ಅದರ ಕನ್ನಡದ ಅವತರಿಣಿಕೆ - ಶ್ರೀ.ಬಿ.ಎಸ್.ಚಂದ್ರಶೇಖರ ಅವರ ಕೃತಿ "ಸವಿಗನ್ನಡ ಸ್ತೋತ್ರಚಂದ್ರಿಕೆ"
ವಿವರಣೆಗಳು :- "ಸಸ್ವರ ಮಹಾನ್ಯಾಸಾದಿ ಮಂತ್ರಾಃ " - ವಿದ್ವಾನ್ ಶೇಷಾಚಲ ಶರ್ಮಾ.







Comments

Popular posts from this blog

ಶಿವ ಸಂಕಲ್ಪ ಸೂಕ್ತ ( ಶುಕ್ಲಯಜುರ್ವೇದ, ವಾಜಸನೇಯ ಸಂಹಿತಾ)

ಮಂತ್ರಪುಷ್ಪ (ತೈತ್ತರೀಯ ಆರಣ್ಯಕ)

ಪುರುಷ ಸೂಕ್ತ