ಆಚಾರ್ಯೋಪದೇಶ (ತೈತ್ತರೀಯೋಪನಿಷತ್-ಪ್ರಥನಾಧ್ಯಾಯ, ಏಕಾದಶಾನುವಾಕ)



ಆಚಾರ್ಯೋಪದೇಶ (ತೈತ್ತರೀಯೋಪನಿಷತ್-ಪ್ರಥನಾಧ್ಯಾಯ, ಏಕಾದಶಾನುವಾಕ)


ಸಂಸ್ಕೃತದಲ್ಲಿ :

ವೇದಮನುಚ್ಯಾಚಾರ್ಯೋತೇವಾಸಿನಮನುಶಾಸ್ತಿ:
ಸತ್ಯಂ ವದ | ಧರ್ಮಂ ಚರ | ಸ್ವಾಧ್ಯಾನ್ಮಾಪ್ರಮದಃ | ಆಚಾರ್ಯಾಯಪ್ರಿಯಂ ಧನಮಾಹೃತ್ಯ | ಪ್ರಜಾತಂತುಂ ಮಾ ವ್ಯವಚ್ಛೇತ್ಸೀಃ | ಸತ್ಯಾನ್ನ ಪ್ರಮದಿತವ್ಯಂ | ಧರ್ಮಾನ್ನ ಪ್ರಮದಿತವ್ಯಂ | ಕ್ಷೇಮಾನ್ನ ಪ್ರಮದಿತವ್ಯಂ | ಭೂತ್ಯೇನ್ನ ಪ್ರಮದಿತವ್ಯಂಸ್ವಾಧ್ಯಾಯ ಪ್ರವಚನಾಭ್ಯಾಂ ನ ಪ್ರಮದಿತವ್ಯಂ | ದೇವ ಪಿತೃಕಾರ್ಯಾನ್ನ ಪ್ರಮದಿತವ್ಯಂಮಾತೃದೇವೋ ಭವ | ಪಿತೃದೇವೋ ಭವ | ಆಚಾರ್ಯದೇವೋ ಭವ | ಅತಿಥಿದೇವೋ ಭವ | ಯಾನ್ಯನವದ್ಯಾನಿ ತಾನಿ ಸೇವಿತವ್ಯಾನಿನೋ ಇತರಾಣಿ| ಯಾನ್ಯಸ್ಮಾಕ ಸುಚರಿತಾನಿ ತಾನಿಮ್ಯೋಪಾಸ್ಯಾನಿ | ನೋ ಇತರಾಣಿ | ಯೇಕೇಚಾರುಮಚ್ಛ್ರೇಯಾ ಸೋ ಬ್ರಾಹ್ಮಣಾಃ | ತೇಷಾಂ ತ್ವಯಾಸ್ಮೇನ ಪ್ರಶ್ವಸಿತವ್ಯಮ್||  ಶ್ರದ್ಧಯಾ ದೇಯಮ್ | ಅಶ್ರದ್ಧಯಾ ಅದೇಯಂ  | ಶ್ರಿಯಾ ದೇಯಮ್ | ಹ್ರಿಯಾ ದೇಯಮ್ | ಭಿಯಾ ದೇಯಮ್ | ಸಂವಿದಾ ದೇಯಮ್ | ಅಥ ಯದಿ ತೇ ಕರ್ಮವಿಚಿಕಿತ್ಸಾವಾವೃತ್ತ ವಿಚಿಕಿತ್ಸಾ ವಾ ಸ್ಯಾತ್ | ಯೇ ತತ್ರ ಬ್ರಾಹ್ಮಣಾಃ ಸಮ್ಮದರ್ಶಿನಃ | ಯುಕ್ತಾ ಆಯುಕ್ತಾಃಅಲೂಕ್ಷಾ ಧರ್ಮಕಾಮಾಃ ಸ್ಯುಃ | ಯಥಾ ತತ್ರ ವರ್ತೇಥಾಃ |   ಅಥಾಭ್ಯಾಖ್ಯಾತೇಷ | ಯೇ ತತ್ರ ಬ್ರಾಹ್ಮಣಾಃ ಸಮ್ಮದರ್ಶಿನಃ | ಯುಕ್ತಾ ಅಯುಕ್ತಾಃ| ಅಲೂಕ್ಷಾ ಧರ್ಮಕಾಮಾ ಸ್ಯುಃ | ಯಥಾ ತೇ ವರ್ತೇರನ್| ತಥಾ ತೇಷು ವರ್ತೇಯಃ | ಏಷ ಆದೇಶಃ | ಏಷ ಉಪದೇಶಃ | ಏಷ ವೇದೋಪನಿಷತ್ | ಏತದನುಶಾಸನಂ | ಏವಮುಪಾಸಿತವ್ಯಮ್ಏವಮುಚೈತದುಪಾಸ್ಯಮ್ ||

ಇತಿ ತೈತ್ತರೀಯ ಉಪನಿಷದಿ ಶೀಕ್ಷಾವಲ್ಲೀ ನಾಮ ಪ್ರಥಮೋಧ್ಯಾಯ ಏಕಾದಶಾನುವಾಕಃ ||

ಆಚಾರ್ಯೋಪದೇಶ - ಕನ್ನಡದಲ್ಲಿ :

ವೇದವ ಕಲಿಸಿ ಗುರುವು ಶಿಷ್ಯಂಗಿದನು ಹೇಳುವನು :
ಸತ್ಯವ ನುಡಿ | ಧರ್ಮದಿ ನಡೆ | ನಿನ್ನ ನಿತ್ಯದಧ್ಯಯನ ಮರೆಯದಿರು | ಆಚಾರ್ಯರಿಗವರೊಲಿದ ಧನವೀಯುವುದು | ಪ್ರಜಾಸಂತತಿಯ ತಂತು ಕಡಿಯದಿರುಸತ್ಯವನಲಕ್ಷಿಸದಿರು | ಧರ್ಮವನಲಕ್ಷಿಸದಿರು | ಕ್ಷೇಮವನಲಕ್ಷಿಸದಿರುಸಂಪದವನಲಕ್ಷಿಸದಿರುನಿನ್ನಧ್ಯಯನ ಪ್ರವಚನಗಳನಲಕ್ಷಿದದಿರು | ದೇವ ಪಿತೃಕಾರ್ಯಗಳನಲಕ್ಷಿಸದಿರು | ತಾಯಿಯ ದೇವರೆಂದೆಣಿಸುತಂದೆಯ ದೇವರೆಂದೆಣಿಸುಆಚಾರ್ಯರ ದೇವರೆಂದೆಣಿಸು | ಅತಿಥಿಯ ದೇವರೆಂದೆಣಿಸು | ದೋಷರಹಿತ ಕರ್ಮಗಳನೆಸಗುಇತರೆಯವುಗಳನಲ್ಲ | ಯಾವ ನಮ್ಮೆಲ್ಲ ಸಚ್ಚರಿತ್ರೆಗಳಿಹವೊ ಅವುಗಳ ನಡೆಸುಇತರೆಯವುಗಳನಲ್ಲ | ಎಮಗಿಂತ ಶ್ರೇಷ್ಠ ಸಜ್ಜನರಾರಿಹರೊ | ಪೀಠವನಿತ್ತವರ ಗೌರವಿಸುಶ್ರದ್ಧೆಯಿಂದ ನೀಡು | ಅಶ್ರದ್ಧೆಯಿಂದ ನೀಡದಿರು | ಕೈಬಿಚ್ಚಿ ನೀಡು | ವಿನಯದಿ ನೀಡು | ಗೌರವದಿ ನೀಡುಸಹಾನುಭೂತಿಯಲಿ ನೀಡುಬಳಿಕ, ಯಾವುದೇ ಕಾರ್ಯದಲಿ ನಡೆಯಲಿ ಸಂಶಯವಿರಲು ಇತರರನನುಸರಿಸದೆ ಕರ್ತವ್ಯ ನಿಷ್ಠೆಯಲಿ ನಡೆವ, ಕಾಠಿಣ್ಯವಿರದ, ಲಾಲಸೆಯಿರದ ಸಮದರ್ಶಿ ಸಜ್ಜನರೆಂತು ವರ್ತಿಸುವರೋ ಅಂತೆ ವರ್ತಿಸುವುದಲ್ಲಿಇನ್ನು, ಆರೋಪಿತರ ವಿಷಯದಿ ಇತರರನನುಸರಿಸದೆ ಕರ್ತವ್ಯ ನಿಷ್ಠೆಯಲಿ ನಡೆವ, ಕಾಠಿಣ್ಯವಿರದ, ಲಾಲಸೆಯಿರದ ಸಮದರ್ಶಿ ಸಜ್ಜನರೆಂತು ವರ್ತಿಸುವರೋ ಅಂತೆ ವರ್ತಿಪುದು | ಇದು ಆದೇಶ | ಇದು ಉಪದೇಶ | ಇದು ವೇದೋಪನಿಷತ್ತು | ಇದೆ ಅನುಶಾಸನವುಇದನು ಆರಾಧಿಸುವುದು | ಹೀಗೆಯೇ ಆರಾಧಿಸುವುದು ||
ಇಂತು ತೈತ್ತರೀಯೋಪನಿಷತ್ತಿನ ಶೀಕ್ಷಾವಲ್ಲಿಯೆಂಬ ಮೊದಲದ್ಯಾಯದ ಹನ್ನೊಂದನೇ ಅನುವಾಕ.||

ವಿವರಣೆ :

ಈ ಅನುವಾಕದಲ್ಲಿ ಆಚಾರ್ಯನು ವೇದಾಧ್ಯಯನದ ನಂತರ ಶಿಷ್ಯನಿಗೆ ಬ್ರಹ್ಮಜ್ಞಾನಕ್ಕಿಂತ ಮೊದಲು ಶ್ರೌತ ಸ್ಮಾರ್ತಾದಿಕರ್ಮಗಳನ್ನು ಮಾಡತಕ್ಕದ್ದೆಂದು ಉಪದೇಶಿಸುತ್ತಿದ್ದಾನೆ. “ಓ ಶಿಷ್ಯನೇ ! ನೀನು ಸತ್ಯವನ್ನು ನುಡಿ, ಧರ್ಮದಂತೆ ನಡೆ. ಅಧ್ಯಯನದ ವಿಷಯವಾಗಿ ಪ್ರಮಾದವನ್ನು ಮಾಡದಿರು. ನಿನ್ನ ಆಚಾರ್ಯನಾದ ನನಗಾಗಿ, ಬಯಸಿದಂತಹ ಧನವನ್ನು ತಂದುಕೊಟ್ಟು ಸಂತಾನಕ್ಕೆ ವಿಚ್ಛೇದನ ಮಾಡದೆ ಪುತ್ರೋತ್ಪತ್ತಿಯಲ್ಲಿ ಪುತ್ರಕಾಮ್ಯಾದಿಕರ್ಮ ಗಳ ಮೂಲಕ ಪ್ರಯತ್ನವನ್ನು ಮಾಡು. ಸತ್ಯದಿಂದಿದ್ದು, ಧರ್ಮದಿಂದಿದ್ದು, ಆತ್ಮನ ರಕ್ಷಣೆಗಾಗಿ ಕರ್ಮದಿಂದಲೂ, ಐಶ್ವರ್ಯಕ್ಕಾಗಿ ಮಂಗಳಮಯವಾದ ಕರ್ಮವನ್ನಾಚರಿಸುತ್ತಾ, ದೇವಪಿತೃಕಾರ್ಯಗಳಿಂದಲೂ, ಪ್ರಮಾದವನ್ನು ಮಾಡಬೇಡ. ತಂದೆ ತಾಯಿಗಳನ್ನು, ಆಚಾರ್ಯರನ್ನು, ಅತಿಥಿಯನ್ನು ದೇವರೆಂದು ಭಾವಿಸು. ಅನಿಂದಿತವಾದ ಕಾರ್ಯಗಳನ್ನು ಮಾಡುತ್ತಾ, ನಿಂದಿತ ಕಾರ್ಯದಿಂದ ದೂರವಿರು. ನಮಗೆ ಅತಿ ಹೆಚ್ಚಿನ ಶುಭವನ್ನುಂಟುಮಾಡುವ ಆಚಾರಗಳನ್ನು ನಿರ್ವಹಿಸುತ್ತಾ ಅಶುಭವಾದುದನ್ನು ಬಿಡುವಂತಹವನಾಗು. ಆಚಾರ್ಯತ್ಯಾದಿ ಧರ್ಮಗಳ ಮೂಲಕ ನಮಗಿಂತ ಪ್ರಶಸ್ತವಾಗಿರುವ ಬ್ರಾಹ್ಮಣರ್ಯಾರಿರುವರೋ ಅವರಿಗೆ ಆಸನಾದಿ ದಾನಗಳಿಂದ ಶ್ರಮವನ್ನು ಹೋಗಲಾಡಿಸುತ್ತಾ, ಅವರು ಹೇಳಿದಂತಹ ಧರ್ಮವನ್ನು ಮಾತ್ರವೇ ಗ್ರಹಿಸುತ್ತಾ, ಅವರು ಏನನ್ನಾದರೂ ಕೆಲವು ಧರ್ಮ ವಿಷಯಗಳನ್ನು ಕುರಿತು ಮಾತನಾಡುತ್ತಿರುವಾಗ ಅತಿ ವಿನಯದಿಂದ ಕೂಡಿ, ಆ ಧರ್ಮಸಾರವನ್ನು ಮಾತ್ರ ಗ್ರಹಿಸು. ಅವರಿಗೆ ವಿರೋಧವಾಗಿ ನಿಟ್ಟುಸಿರನ್ನು ಸಹ ಬಿಡಬಾರದು.

ಅಂತಹವರಿಗೆ ಏನಾದರೂ ಕೊಡುವ ಅವಕಾಶ ಪ್ರಾಪ್ತವಾದಾಗ ಅವರಿಗೆ ಅದನ್ನು ಅತಿ ಹೆಚ್ಚಿನ ಶ್ರದ್ಧೆಯಿಂದ, ಸಂಕೋಚದಿಂದ, ಲಜ್ಜಾಶೀಲನಾಗಿ, ಭಯಭೀತಿಗಳಿಂದ, ಇನ್ನೂ ಹೆಚ್ಚಿನ ಮೈತ್ರಾದಿ ಜ್ಞಾನದಿಂದ ಕೊಡಬೇಕು. ಅಶ್ರದ್ಧೆಯಿಂದ ಮಾತ್ರ ಕೊಡಬಾರದು. ನಿನಗೆ ಕರ್ಮದಲ್ಲಾಗಲಿ, ಆಚಾರದಲ್ಲಾಗಲಿ ಏನಾದರೂ ಸಂದೇಹ ಉಂಟಾದರೆ, ಆ ಕಾಲದಲ್ಲಿ ಆ ದೇಶದಲ್ಲಿ ಧರ್ಮಾಧರ್ಮ ಸಮರ್ಥರೂ, ಆಚಾರ್ಯರೂ, ಸ್ವತಂತ್ರರೂ, ಕ್ರೂರಿಗಳಾಗಿಲ್ಲದವರು, ಕಾಮಕ್ಕೆ ವಶರಾಗದಂತಹ ಬ್ರಾಹ್ಮಣ ಶ್ರೇಷ್ಟರು ಆ ಕರ್ಮಾಚಾರಗಳಲ್ಲಿ ಹೇಗೆ ಪ್ರವರ್ತಿಸುತ್ತಾರೋ ನೀನೂ ಕೂಡಾ ಹಾಗೆಯೇ ಪ್ರವರ್ತಿಸು. ಧರ್ಮಾಧರ್ಮ ವಿಚಾರಣ ಸಮರ್ಥರೂ, ಆಚಾರ್ಯರೂ, ಸ್ವತಂತ್ರರೂ, ಅಕ್ರೂರರು ಅಕಾಮಹತರಾಗಿ ಆಯಾ ಕಾಲದಲ್ಲಿ, ಆಯಾ ಪ್ರದೇಶದಲ್ಲಿರುವಂತಹ ಬ್ರಾಹ್ಮಣ ಶ್ರೇಷ್ಠರು ಕರ್ಮಾಚಾರಗದಲ್ಲಿ ಹೇಗೆ ಪ್ರವರ್ತಿಸುತ್ತಾರೋ, ನೀನೂ ಹಾಗೆಯೇ ಪ್ರವರ್ತಿಸು. ಇದೇ ಉಪದೇಶ. ಇದೇ ವೇದರಹಸ್ಯ. ಈ ಪ್ರಕಾರವಾಗಿಯೇ ಉಪಾಸನೆಯನ್ನು ಮಾಡಬೇಕು.

ಶಾಂತಿ ಮಂತ್ರ :

ಶಂ ನೋ ಮಿತ್ರಶ್ಯಂ ವರುಣಃ; ಶಂ ನೋ ಭವತ್ಪರ್ಯ ಮಾ
ಶಂ ನ ಇಂದ್ರೊ ಬೃಹಸ್ಪತಿಃ; ಶಂ ನೋ ವಿಷ್ಣುರುರುಕ್ರಮಃ
ನಮೋ ಬ್ರಹ್ಮಣೇ ನಮಸ್ತೇ ವಾಯೋ; ತ್ವಮೇವ ಪ್ರತ್ಯಕ್ಷಂ ಬ್ರಹ್ಮಾಸಿ
ತ್ವಮೇವ ಪ್ರತ್ಯಕ್ಷಂ ಬ್ರಹ್ಮಾವಾದಿಷಮ್; ಋತಮವಾದಿಷಮ್ ಸತ್ಯಮವಾದಿಷಮ್
ತನ್ಮಾಮಾವೀತ್ ತದ್ವಕ್ತಾರಮಾವೀತ್; ಆವೀನ್ಮಾಮ್ ಆವೀದ್ವಕ್ತಾರಮ್
ಓಂ ಶಾಂತಿಃ ಶಾಂತಿಃ ಶಾಂತಿಃ

ವಿವರಣೆ :

ಮಿತ್ರನನ್ನು, ವರುಣನನ್ನು, ಆರ್ಯನನ್ನು, ಇಂದ್ರನನ್ನು, ಬೃಹಸ್ಪತಿಯನ್ನು, ವಿಷ್ಣುವನ್ನು- ವೀರರು ಕ್ರಮವಾಗಿ ಪ್ರಾಣದಲ್ಲಿಯೂ, ಅಪಾನದಲ್ಲಿಯೂ, ನೇತ್ರದಲ್ಲಿಯೂ, ಬಲದಲ್ಲಿಯೂ, ವಾಗ್ಬುದ್ಧಿಗಳಲ್ಲಿಯೂ, ಪಾದಗಳಲ್ಲಿಯೂ, ವಿದ್ಯಾಶ್ರವಣ ಧಾರಣೋಪಯೋಗವಾಗುವಂತೆ ನಮಗೆ ಸುಖವನ್ನು ಕೊಡುವಂತಹವರಾಗಲಿ ! ವಾಯುದೇವಾ ! ಪರಬ್ರಹ್ಮಸ್ವರೂಪನಾದ ನಿನಗೆ ನಮಸ್ಕಾರ. ಯಾವ ಕಾರಣದಿಂದ ನೀನು ಪ್ರತ್ಯಕ್ಷವಾದಂತಹ ಬ್ರಹ್ಮಸ್ವರೂಪಿಯಾಗುತ್ತಿದ್ದೀಯೋ, ಆ ಕಾರಣದಿಂದ ನಿನ್ನನ್ನು ಪ್ರತ್ಯಕ್ಷ ಬ್ರಹ್ಮವೆಂದೂ, ಶಾಸ್ತ್ರ ಕರ್ತವ್ಯಗಳನ್ನು ಅತಿಕ್ರಮಿಸಿದ ಬುದ್ಧಿ ನಿಶ್ಚಿತವಾದ ಅರ್ಥವುಳ್ಳ ಋತುವನ್ನಾಗಿಯೂ, ವಾಕ್ಕಾಯಗಳ ಮೂಲಕ ಸಂಪಾದಿಸತಕ್ಕಂಥಹ ಸತ್ಯವನ್ನಾಗಿಯೂ ಹೇಳಿದ್ದೇನೆ. ಹೀಗೆ ವಾಯುವೆನ್ನುವ ಹೆಸರುಳ್ಳ ನನ್ನಿಂದ ಸ್ತುತಿಸಲ್ಪಡುತ್ತಿರುವ ಆ ಪರಬ್ರಹ್ಮವು ನನ್ನನ್ನು ವಿದ್ಯೆಯಲ್ಲಿ ಸೇರಿಸುವುದರಿಂದಲೂ, ಆಚಾರ್ಯನ ವ್ಯಕ್ತಿತ್ವ ಸಾಮರ್ಥ್ಯದೊಡನೆ ಸೇರಿಸಿರಲು, ಕಾಪಾಡುವಂತಾಗಲಿ ! ಎಂದು ವಿದ್ಯಾರ್ಥಿಯಾದ ಪುರುಷನು ಪ್ರಾರ್ಥಿಸುತ್ತಿದ್ದಾನೆ. ಈ ಶಾಂತಿತ್ರಯವು ಆಧ್ಯಾತ್ಮಿಕದಿ ತಾಪತಯ ನಿವಾರಣೆಗಾಗಿ ಹೇಳಲಾಗಿದೆ.

ಶಿಕ್ಷಾವಲ್ಲಿ ಮುಗಿದಿದೆ.

ಮೂಲಗಳು : ಸಂಸ್ಕೃತ ಮಂತ್ರ ಹಾಗೂ ಅದರ ಕನ್ನಡ ಅವತರಣಿಕೆ - ಶ್ರೀ.ಬಿ.ಎಸ್. ಚಂದ್ರಶೇಖರ ಅವರಸವಿಗನ್ನಡ ಸ್ತೋತ್ರಚಂದ್ರಿಕೆ
ವಿವರಣೆ - ೧೦೮ ಉಪನಿಷತ್ತ್ ಸರ್ವಸ್ವ, ಪ್ರಥಮಾಧ್ಯಾಯ - ಶ್ರೀಮಾನ್ ಭಾರ್ಗವ ನರಸಿಂಹ.




Comments

Popular posts from this blog

ಶಿವ ಸಂಕಲ್ಪ ಸೂಕ್ತ ( ಶುಕ್ಲಯಜುರ್ವೇದ, ವಾಜಸನೇಯ ಸಂಹಿತಾ)

ಮಂತ್ರಪುಷ್ಪ (ತೈತ್ತರೀಯ ಆರಣ್ಯಕ)

ಪುರುಷ ಸೂಕ್ತ